×
Ad

50 ಪ್ರಯಾಣಿಕರನ್ನು ಬಿಟ್ಟು ತೆರಳಿದ ಗೋ ಫಸ್ಟ್‌ ವಿಮಾನ ಸಂಸ್ಥೆಗೆ ಡಿಜಿಸಿಎ ನೋಟಿಸ್‌

Update: 2023-01-10 18:35 IST

ಹೊಸದಿಲ್ಲಿ: ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದ ಟಾರ್ಮಾಕ್‌ನಲ್ಲಿ ಬಸ್‌ನಲ್ಲಿಯೇ ಇರುವಂತೆಯೇ ಅವರನ್ನು ಬಿಟ್ಟು ಗೋ ಫಸ್ಟ್‌ ಏರ್‌ವೇಸ್‌ (Go First Airways) ವಿಮಾನವು ನಿರ್ಗಮಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಗೋ ಫಸ್ಟ್‌ ಏರ್‌ವೇಸ್‌ಗೆ ಹಲವು ತಪ್ಪುಗಳಿಗಾಗಿ ನೋಟಿಸ್‌ ಜಾರಿಗೊಳಿಸಿದೆ.

ಸೂಕ್ತ ಸಂವಹನ, ಸಮನ್ವಯ ಹಾಗೂ ದೃಢೀಕರಣವಿರದೇ ಇರುವಂತಹ ಹಲವಾರು ತಪ್ಪುಗಳನ್ನು ವಿಮಾನಯಾನ ಸಂಸ್ಥೆ ಮಾಡಿದೆ, ಇಂತಹ ಒಂದು ತಪ್ಪನ್ನು ತಪ್ಪಿಸಬಹುದಾಗಿತ್ತು ಎಂದು ಡಿಜಿಸಿಎ ಹೇಳಿದೆ. ಈ ನೋಟಿಸ್‌ಗೆ ಗೋ ಫಸ್ಟ್‌ ಏರ್‌ವೇಸ್‌ ಎರಡು ವಾರಗಳೊಳಗಾಗಿ ಉತ್ತರಿಸಬೇಕಿದೆ.

ಗೋ ಫಸ್ಟ್‌ ಏರ್‌ವೇಸ್‌ನ ಫ್ಲೈಟ್‌ ಜಿ8 116 ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಬೆಳಿಗ್ಗೆ 6.30 ಕ್ಕೆ ನಿರ್ಗಮಿಸಿತ್ತು. ಈ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರನ್ನು ನಾಲ್ಕು ಬಸ್ಸುಗಳಲ್ಲಿ ವಿಮಾನದ ಹತ್ತಿರ ಕಳಿಸಲಾಗಿತ್ತು. ಸುಮಾರು 55 ಪ್ರಯಾಣಿಕರು ಒಂದು ಬಸ್ಸಿನಲ್ಲಿ ತಮ್ಮ ಬೋರ್ಡಿಂಗ್‌ ಪಾಸ್‌ ಹಿಡಿದುಕೊಂಡು ಹಾಗೂ ಬ್ಯಾಗೇಜ್‌ ಚೆಕ್‌ ಇನ್‌ ಪ್ರಕ್ರಿಯೆ ಮುಗಿದು ಕಾಯುತ್ತಿದ್ದಂತೆಯೇ ಅವರನ್ನು ಬಿಟ್ಟು ವಿಮಾನ ಹಾರಿತ್ತು.

ಬಾಕಿಯುಳಿದ ಪ್ರಯಾಣಿಕರನ್ನು ನಾಲ್ಕು ಗಂಟೆ ನಂತರ ಬೇರೆ ವಿಮಾನದಲ್ಲಿ ದಿಲ್ಲಿಗೆ ಕಳುಹಿಸಲಾಯಿತು.

ಇದನ್ನೂ ಓದಿ:  ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Similar News