ಜಮ್ಮು-ಕಾಶ್ಮೀರ: ಗಸ್ತು ನಿರತ ಮೂವರು ಸೈನಿಕರು ಕಮರಿಗೆ ಬಿದ್ದು ಮೃತ್ಯು
Update: 2023-01-11 10:40 IST
ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚ್ಚಲ್ ಸೆಕ್ಟರ್‌ನ ಎಲ್‌ಒಸಿ ಬಳಿ ಗಸ್ತು ತಿರುಗುತ್ತಿದ್ದಾಗ ಆಳವಾದ ಕಂದರಕ್ಕೆ ಜಾರಿಬಿದ್ದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್‌ನ ಮೂವರು ಯೋಧರು ಬುಧವಾರ ಸಾವನ್ನಪ್ಪಿದ್ದಾರೆ.
ಎಲ್ಲಾ ಮೂವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹೇಳಿಕೆಯ ಪ್ರಕಾರ, ಈ ಘಟನೆಯು ಮಚ್ಚಲ್ ಸೆಕ್ಟರ್‌ನಲ್ಲಿ ನಡೆದಿದೆ. ಫಾರ್ವರ್ಡ್ ಏರಿಯಾದಲ್ಲಿ ನಿಯಮಿತ ಕಾರ್ಯಾಚರಣೆಯ ಸಮಯದಲ್ಲಿ, ಜೂನಿಯರ್ ಕಮಿಷನರ್ ಆಫೀಸರ್(ಜೆಸಿಒ) ಹಾಗೂ ಇಬ್ಬರು ಯೋಧರು ಆಳವಾದ ಕಮರಿಗೆ ಜಾರಿ ಬಿದ್ದರು. ಎಲ್ಲಾ ಮೂವರು ಧೈರ್ಯಶಾಲಿ ಸೈನಿಕರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.