×
Ad

ಕರ್ತವ್ಯಕ್ಕೆ ಹಾಜರಾಗಿ ಇಲ್ಲವೇ ಅಮಾನತು ಎದುರಿಸಿ: ಅಧಿಕಾರಿಗಳಿಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಎಚ್ಚರಿಕೆ

Update: 2023-01-11 13:53 IST

ಚಂಡೀಗಢ: ತಮ್ಮ ಸಹೋದ್ಯೋಗಿಯ "ಅಕ್ರಮ" ಬಂಧನವನ್ನು ಪ್ರತಿಭಟಿಸಿ ಸಾಮೂಹಿಕ ರಜೆಯಲ್ಲಿರುವ ಪಂಜಾಬ್ ನ ನಾಗರಿಕ ಸೇವಾ ಅಧಿಕಾರಿಗಳಿಗೆ ಮಧ್ಯಾಹ್ನ 2 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು, ಇದಕ್ಕೆ ತಪ್ಪಿದಲ್ಲಿ ಅಮಾನತು ಗೊಳಿಸಲಾಗುವುದು ಎಂದು ಪಂಜಾಬ್   ಮುಖ್ಯಮಂತ್ರಿ ಭಗವಂತ್ ಮಾನ್ Bhagwant Mann ಎಚ್ಚರಿಸಿದ್ದಾರೆ.

"ಇಂತಹ ಮುಷ್ಕರವು ಬ್ಲ್ಯಾಕ್‌ಮೇಲಿಂಗ್ ಗೆ ಸಮಾನವಾಗಿದೆ" ಎಂದು ಅವರು ಹೇಳಿದರು.

ರಾಜ್ಯ ವಿಜಿಲೆನ್ಸ್ ಬ್ಯೂರೋದಿಂದ ಲೂಧಿಯಾನದಲ್ಲಿ ಪಿಸಿಎಸ್ ಅಧಿಕಾರಿ ನರೀಂದರ್ ಸಿಂಗ್ ಧಲಿವಾಲ್ ಅವರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಸೋಮವಾರದಿಂದ ಅಧಿಕಾರಿಗಳು ಐದು ದಿನಗಳ ಸಾಮೂಹಿಕ ರಜೆಗೆ ತೆರಳಿದ್ದರಿಂದ ರಾಜ್ಯದ ಆಡಳಿತ ಕಚೇರಿಗಳಲ್ಲಿನ ಸೇವೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನಲೆಯಲ್ಲಿ ಭಗವಂತ್ ಮಾನ್ ಕಠಿಣ ನಿಲುವು ತೆಗೆದುಕೊಂಡಿದ್ದಾರೆ.

"ಕೆಲವು ಅಧಿಕಾರಿಗಳು ಮುಷ್ಕರದ ನೆಪದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ತರಲಾಗಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಸರಕಾರ ಕೈಗೊಂಡಿರುವ ಕಠಿಣ ಕ್ರಮಗಳ ವಿರುದ್ಧ ಅವರು ಪ್ರತಿಭಟಿಸುತ್ತಿದ್ದಾರೆ" ಎಂದು ಮಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Similar News