ಇನ್ಸ್ಟಾಗ್ರಾಮ್ ಕಮೆಂಟ್ ಕುರಿತು ಜಗಳ: ಮೂವರಿಗೆ ಚೂರಿ ಇರಿತ; 8 ಮಂದಿ ಹದಿಹರೆಯದವರ ಬಂಧನ

Update: 2023-01-11 10:44 GMT

ಹೊಸದಿಲ್ಲಿ: ಇನ್ಸ್ಟಾಗ್ರಾಮ್ (Instagram) ಪೋಸ್ಟ್ ಒಂದಕ್ಕೆ ಅವಹೇಳನಕಾರಿ ಕಮೆಂಟ್ ಮಾಡಲಾಗಿದೆ ಎಂಬ ಕಾರಣಕ್ಕೆ ಹದಿಹರೆಯದವರ ಎರಡು ಗುಂಪುಗಳ ನಡುವೆ ಕಿತ್ತಾಟ ನಡೆದಿದ್ದು, ಈ ಸಂದರ್ಭದಲ್ಲಿ ಮೂವರು ಇರಿತಕ್ಕೆ ಒಳಗಾಗಿರುವ ಘಟನೆ ವಾಯುವ್ಯ ದಿಲ್ಲಿಯ ಜಹಾಂಗಿರಿಪುರಿಯಲ್ಲಿ ನಡೆದಿದೆ ಎಂದು indianexpress.com ವರದಿ ಮಾಡಿದೆ.

ಮಂಗಳವಾರ ಘಟನೆಯ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಯ ಪೊಲೀಸರು ಕರೆ ಸ್ವೀಕರಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡವು, ಇರಿತದಿಂದ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿದೆ. ಈ ಸಂಬಂಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಪ್ರಯತ್ನ) ಹಾಗೂ ಸೆಕ್ಷನ್ 34 (ಒಂದೇ ಉದ್ದೇಶದಿಂದ ಹಲವಾರು ವ್ಯಕ್ತಿಗಳು ನಡೆಸಿರುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಎಂಟು ಮಂದಿ  ಹದಿಹರೆಯದವರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಆಯುಕ್ತರು, "ಘಟನೆಯಲ್ಲಿ ಯಾವುದೇ ಕೋಮು ನೆಲೆ ಕಂಡು ಬಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 'RRR' ಚಿತ್ರದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ: ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಹೀಗೆ...

Similar News