ಜ.15ರಿಂದ 22ರವರೆಗೆ "ಕುಂಡೂರು ದರ್ಗಾ ಉರೂಸ್"

Update: 2023-01-11 10:59 GMT

ಉಳ್ಳಾಲ: ಕೇಂದ್ರ ಜುಮಾ ಮಸೀದಿ ಕುಂಡೂರು ಪರಿಯಕ್ಕಳದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಅಸಯ್ಯದ್ ಮುಹಮ್ಮದ್ ರಿಫಾಯಿ ಅಲ್ ಬುಖಾರಿ ಅವರ  ಹೆಸರಿನಲ್ಲಿ  19ನೇ ಕುಂಡೂರು ಮುಖಾಂ ಉರೂಸ್ ಕಾರ್ಯಕ್ರಮವು ಜ. 15ರಿಂದ 22ವರೆಗೆ  ಕುಂಡೂರು ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಂಡೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಸ್ವಾಗತ್ ಹೇಳಿದರು.

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 15ರಂದುರಾತ್ರಿ ನಡೆಯಲಿರುವ  ಈ ಕಾರ್ಯಕ್ರಮ ದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ. ಕುಂಡೂರು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಸಿದ್ದೀಕ್ ಸ್ವಾಗತ್  ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಡೂರು ಜುಮಾ ಮಸೀದಿ ಖತೀಬ್ ಅಬೂ ಝಾಹಿರ ಕೆ.ಎಸ್.ಉಸ್ಮಾನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಅದೇ ದಿನ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಾಕ್ಕಾಡ್ ರವರ ನೇತೃತ್ವದಲ್ಲಿ ನೂರೆ ಅಜ್ಮೀರ್ ಕಾರ್ಯಕ್ರಮ ನಡೆಯಲಿದೆ ಎಂದರು.

ಜನವರಿ 16ರ ರಾತ್ರಿ ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜನವರಿ 17ರ ರಾತ್ರಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಉಪಾಧ್ಯಕ್ಷ ಎಂ.ಟಿ‌.ಉಸ್ತಾದ್  ದುಆ ನೆರವೇರಿಸಲಿದ್ದು,  ಶರೀಫ್ ಅಶ್ರಫಿ ಪೊಸೋಟು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜನವರಿ 18ರ ರಾತ್ರಿ ಬರಕತ್ ಅಲಿ ಲಬ್ಬೆ ಮುತ್ತು ಪೇಟೆ ದುಆ ನೆರವೇರಿಸಲಿದ್ದು, ನೌಫಲ್ ಸಖಾಫಿ ಕಳಸ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.

ಜನವರಿ 19ರ ರಾತ್ರಿ ಸಮಸ್ತ ಕೇರಳ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಪ್ರೊ ಅಲಿ ಕುಟ್ಟಿ ಉಸ್ತಾದ್ ದುಆ ನೆರವೇರಿಸಲಿದ್ದು, ಕಣ್ಣೂರು ಕೇಂದ್ರ ಜುಮ್ಮಾ ಮಸೀದಿ ಖತೀಬ್ ಸಿ.ಎಂ.ಅನ್ಸಾರ್ ಫೈಝಿ ಅಲ್ ಬುರ್ಹಾನಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.

ಜನವರಿ 20ರ ರಾತ್ರಿ  ಮಲಪ್ಪುರಂ ಮಾದಿನ್ ಅಕಾಡಮಿ ಚೇರ್ಮನ್ ಬದ್ರುಸಾದಾತ್ ಅಸ್ಸಯ್ಯದ್ ಖಲೀಲ್ ಅಲ್ ಬುಖಾರಿ ಕಡಲುಂಡಿ ದುಆ ನೆರವೇರಿಸಲಿದ್ದು, ಅಡ್ಯಾರ್ ಕಟ್ಟೆ ಮಸೀದಿ ಖತೀಬ್ ಅಬ್ದುಲ್ ಹಕೀಂ ಮದನಿ ಪಾಂಡವರ ಕಲ್ಲು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜನವರಿ 21ರ ರಾತ್ರಿ ಕೆ.ಪಿ.ಇರ್ಶಾದ್ ದಾರಿಮಿ ಮಿತ್ತಬೈಲ್ ದುಆ ನೆರವೇರಿಸಲಿದ್ದು, ಸಿದ್ದೀಕ್ ಅಝ್ ಹರಿ ಪಯ್ಯನ್ನೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.

ಜನವರಿ 22ರ ಅಸರ್ ನಮಾಝ್ ಬಳಿಕ ಸೌಹಾರ್ದ ಸಮಾವೇಶವು ಕೇಂದ್ರ ಜುಮ್ಮಾ ಮಸೀದಿ ಕುಂಡೂರು ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸ್ವಾಗತ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೆ.ಬಿ.ಅಬ್ದುಲ್ ರಝಾಕ್ ಮಿಸ್ಬಾಯಿ ದುಆ ನೆರವೇರಿಸಲಿದ್ದು, ಅಬ್ದುಲ ಅಝೀಝ್ ದಾರಿಮಿ ಸೌಹಾರ್ದ ಭಾಷಣ ಮಾಡಲಿದ್ದಾರೆ.ಈ ಕಾರ್ಯಕ್ರಮ ದಲ್ಲಿ ಉಸ್ಮಾನ್ ಫೈಝಿ ತೋಡಾರ್ ಬಿ.ಕೆ.ಅಬ್ದುಲ್ ರಝಾಕ್ ಮಿಸ್ಬಾಯಿ ಬಾಯಾರ್  ಸಹಿತ ಹಲವಾರು ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿ ಗೋಷ್ಠಿಯಲ್ಲಿ  ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಮುಟ್ಟಿಕಲ್, ಜಮಾಅತ್ ಕಮಿಟಿ ಕಾರ್ಯದರ್ಶಿ ಇರ್ಶಾದ್ ಮಜಲ್ ತೋಟ,ರಶೀದ್ ಕುಂಡೂರು, ಅಬೂಸಾಲಿ ಮದಕ, ಇಬ್ರಾಹಿಂ ಶಾಲೆಪಡ್ಪು, ಸಂಶೀರ್ ಕೊಲಂಜೆಬೆಟ್ಟು ಉಪಸ್ಥಿತರಿದ್ದರು.

Similar News