ಕಾಸರಗೋಡು: ಆಫ್ರಿಕನ್ ಹಂದಿ ಜ್ವರ ಪತ್ತೆ

ಸೋಂಕು ಪತ್ತೆಯಾದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಂದಿ ಮಾಂಸ ಮಾರಾಟಕ್ಕೆ ನಿಷೇಧ

Update: 2023-01-11 16:03 GMT

ಕಾಸರಗೋಡು: ಕಾಸರಗೋಡು ಸಮೀಪದ ಪೆರ್ಲ ಕಾಟುಕುಕ್ಕೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಹಂದಿಗಳಿಗೆ ತಗಲುವ ವೈರಸ್  ಆದ ಆಫ್ರಿಕನ್ ಸೈವನ್  ಫಿವರ್ ರೋಗ ದೃಢ ಪಟ್ಟಿರುವುದಾಗಿ ಜಿಲ್ಲಾ ಪಶು ಸಂಗೋಪನಾ ಅಧಿಕಾರಿ ತಿಳಿಸಿದ್ದಾರೆ

ಮಂಜೇಶ್ವರ ತಾಲೂಕು ವ್ಯಾಪ್ತಿಯ ಕಾಟು ಕುಕ್ಕೆಯಲ್ಲಿರುವ ಹಂದಿ ಫಾರ್ಮ್ ನಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ.ಕೆ ರಮೇಂದ್ರನ್ ತಿಳಿಸಿದ್ದಾರೆ.

ಸಾಕು ಹಂದಿ ಹಾಗೂ ಕಾಡು ಹಂದಿಗಳಲ್ಲಿ ಕಂಡು ಬರುವ ಗಂಭೀರ ಸ್ವರೂಪದ ಈ ಸೊಂಕು, ಸಂಪರ್ಕ ಹಾಗೂ ಇತರ ರೂಪದಲ್ಲೂ ಹರಡುತ್ತಿದೆ. ಈ ಸೋಂಕು ಮನುಷ್ಯರು ಅಥವಾ ಇತರ ಪ್ರಾಣಿಗಳಿಗೆ ಹರಡದು. ಇದರಿಂದ ಈ ಸೋಂಕು ಪತ್ತೆಯಾದ ಕೇಂದ್ರದಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಹಂದಿಗಳನ್ನು ನಿರ್ಮೂಲನೆ ಗೊಳಿಸಬೇಕು. ಅಲ್ಲದೆ ಹಂದಿಗಳನ್ನು ಕೊಲ್ಲುವುದು, ಮಾಂಸ ಮಾರಾಟ, ಹಂದಿಗಳ ಸಾಗಾಟ ನಡೆಸಬಾರದು. ಭಾರತದಲ್ಲಿ 2020ರ ಜನವರಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಹಂದಿ ಜ್ವರ ಕಾಣಿಸಿ ಕೊಂಡಿತ್ತು ಎಂದು ಅವರು ತಿಳಿಸಿದರು. 

ಈ ನಡುವೆ  ಸೋಂಕು ಪತ್ತೆಯಾದ ಕೇಂದ್ರದ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಂದಿಗಳನ್ನು ಕೊಲ್ಲುವ ಮತ್ತು ಮಾಂಸ ಮಾರಾಟವನ್ನು  ನಿಷೇಧಿಸಿ  ಇಲಾಖೆ ಆದೇಶ ಹೊರಡಿಸಿದೆ.

Similar News