ಭಯೋತ್ಪಾದಕ ಕೃತ್ಯಗಳಿಗೆ ಸಂಚು ಆರೋಪ: ಮಂಗಳೂರಿನ ಓರ್ವ ಸಹಿತ ಇಬ್ಬರನ್ನು ಬಂಧಿಸಿದ ಎನ್‌ಐಎ

Update: 2023-01-11 14:32 GMT

ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಸಂಚು ಹೂಡಿದ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಮಂಗಳೂರು ಮತ್ತು ಧಾರವಾಡ ಮೂಲದ ಇಬ್ಬರನ್ನು ಬಂಧಿಸಿದೆ. ಇದರೊಂದಿಗೆ ಐಸಿಸ್ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿಸಲ್ಪಟ್ಟವರ ಸಂಖ್ಯೆ ಆರಕ್ಕೇರಿದೆ.

ಬಂಧಿತರನ್ನು ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಮಾಝಿನ್ ಅಬ್ದುಲ್ ರಹ್ಮಾನ್ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ದೇವನಾಯಕನಹಳ್ಳಿಯ ನದೀಮ್ ಅಹ್ಮದ್ ಕೆ.ಎ. ಎಂದು ಗುರುತಿಸಲಾಗಿದೆ.

ಭಯೋತ್ಪಾದನಾ ಕೃತ್ಯಕ್ಕೆ ಸಂಚು ಹೂಡಿದ ಆರೋಪದ ಮೇಲೆ ಮಾಝ್ ಮುನೀರ್ ಅಹ್ಮದ್ ಹಾಗೂ ಸೈಯದ್ ಯಾಸೀನ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಎನ್‌ಐಎಗೆ ವಹಿಸಿಕೊಡಲಾಗಿತ್ತು. ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಮಂಗಳವಾರ ಮಾಝಿನ್ ಅಬ್ದುಲ್ ರಹ್ಮಾನ್ ಮತ್ತು ನದೀಮ್ ಅಹ್ಮದ್ ಕೆ.ಎ. ಅವರನ್ನು ಬಂಧಿಸಲಾಗಿದೆ.

ಮಾಝ್ ಮುನೀರ್ ಹಾಗೂ ಸೈಯದ್ ಯಾಸೀನ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಶಿವಮೊಗ್ಗ ಜಿಲ್ಲೆಯ ಹುಝೈರ್ ಫರ್ಹಾನ್ ಬೇಗ್ ಮತ್ತು ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಶಾಂತಿನಗರದ ರೇಷಾನ್ ತಾಜುದ್ದೀನ್ ಶೇಖ್‌ನನ್ನು ಎನ್‌ಐಎ ಅಧಿಕಾರಿಗಳ ತಂಡ ಜ.5ರಂದು ಬಂಧಿಸಿತ್ತು.

ಇದನ್ನೂ ಓದಿ: ಭಾರತದಲ್ಲಿ ಬದುಕಲು ಮುಸ್ಲಿಮರಿಗೆ 'ಅನುಮತಿ' ನೀಡಲು ಮೋಹನ್‌ ಭಾಗ್ವತ್‌ ಯಾರು: ಉವೈಸಿ ವಾಗ್ದಾಳಿ

Similar News