×
Ad

‘‘ಮೊದಲು ನಾವು ಭಾರತೀಯರು’’ : ಆಂಧ್ರ ಸಿಎಂ ಜಗನ್ ರೆಡ್ಡಿಯನ್ನು ಟೀಕಿಸಿದ ಅದ್ನಾನ್ ಸಮಿ

Update: 2023-01-11 22:14 IST

ಹೊಸದಿಲ್ಲಿ, ಜ. 11: ಶ್ರೇಷ್ಠ ಮೂಲ ಹಾಡು ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿರುವ ಎಸ್.ಎಸ್. ರಾಜಾವೌಳಿಯ ‘ಆರ್‌ಆರ್‌ಆರ್’ ಚಿತ್ರ ತಂಡವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಬುಧವಾರ ಅಭಿನಂದಿಸಿದ್ದಾರೆ.

‘‘ತೆಲುಗು ಧ್ವಜವು ಎತ್ತರದಲ್ಲಿ ಹಾರಾಡುತ್ತಿದೆ! ಆಂಧ್ರಪ್ರದೇಶದ ಎಲ್ಲರ ಪರವಾಗಿ ನಾನು ಎಮ್‌ಎಮ್‌ಕೀರವಾಣಿ, ಎಸ್‌ಎಸ್‌ರಾಜಾಮೌಳಿ, , ಆಲ್ವೇಸ್‌ರಾಮ್‌ ಚರಣ್ ಮತ್ತು ಇಡೀ ಆರ್‌ಆರ್‌ಆರ್‌ಮೂವೀ ಚಿತ್ರ ತಂಡವನ್ನು ಅಭಿನಂದಿಸುತ್ತೇನೆ. ನಾವು ನಿಮ್ಮ ಬಗ್ಗೆ ಅಗಾಧ ಹೆಮ್ಮೆ ಪಡುತ್ತೇವೆ! ಗೋಲ್ಡನ್‌ ಗ್ಲೋಬ್ಸ್2023’’ ಎಂಬುದಾಗಿ ಮುಖ್ಯಮಂತ್ರಿ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ, ಗಾಯಕ ಅದ್ನಾನ್ ‘‘ನಾವು ಮೊದಲು ಭಾರತೀಯರು. ಪ್ರತ್ಯೇಕತಾವಾದಿ ಮನೋಭಾವ ಅನಾರೋಗ್ಯಕರ’’ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಮಿ, ‘‘ತೆಲುಗು ಧ್ವಜ? ಭಾರತದ ಧ್ವಜ ಎಂದು ನೀವು ಹೇಳಿರಬೇಕಲ್ಲವೇ? ನಾವು ಮೊದಲು ಭಾರತೀಯರು. ಹಾಗಾಗಿ, ದೇಶದ ಉಳಿದ ಭಾಗದಿಂದ ನಿಮ್ಮನ್ನು ಪ್ರತ್ಯೇಕಿಸುವುದನ್ನು ನಿಲ್ಲಿಸಿ. ಅದರಲ್ಲೂ ಮುಖ್ಯವಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಾವು ಒಂದು ದೇಶವಾಗಿದ್ದೇವೆ. 1947ರಲ್ಲಿ ನಾವು ನೋಡಿದಂತೆ, ಈ ಪ್ರತ್ಯೇಕತಾವಾದಿ ಧೋರಣೆಯು ಅತ್ಯಂತ ಅನಾರೋಗ್ಯಕರವಾಗಿದೆ. ಧನ್ಯವಾದಗಳು... ಜೈ ಹಿಂದ್’’ ಎಂದು ಬರೆದಿದ್ದಾರೆ.

ಪಾಕಿಸ್ತಾನಿ ಪ್ರಜೆಯಾಗಿದ್ದ ಸಮಿ 2016 ಜನವರಿ ಒಂದರಿಂದ ಭಾರತೀಯ ಪ್ರಜೆಯಾಗಿದ್ದಾರೆ.

Similar News