​ಫ್ರಾನ್ಸ್: 6 ಮಂದಿಗೆ ಚೂರಿ ಇರಿತ

Update: 2023-01-11 17:54 GMT

ಪ್ಯಾರಿಸ್, ಜ.11: ಪ್ಯಾರಿಸ್ ನ ಜನನಿಬಿಡ ಗರೆಡು ನಾರ್ಡ್ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಚೂರಿಯಿಂದ ನಡೆಸಿದ ದಾಳಿಯಲ್ಲಿ 6 ಮಂದಿ ಅಲ್ಪಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಬಳಿಕ ದಾಳಿಕೋರನ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಆತ ಗಾಯಗೊಂಡಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚೂರಿ ಇರಿತ ಭಯೋತ್ಪಾದಕ ಕೃತ್ಯವಲ್ಲ, ಇದು ಕ್ರಿಮಿನಲ್ ಕೃತ್ಯವೆಂದು ಪರಿಗಣಿಸಲಾಗಿದ್ದು ದಾಳಿಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಪೊಲೀಸರ ಗುಂಡೇಟಿನಿಂದ ಗಂಭೀರ ಗಾಯಗೊಂಡಿರುವ ದಾಳಿಕೋರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗರೆಡು ನಾರ್ಡ್ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಚೂರಿ ಇರಿತದಿಂದ ಹಲವರು ಗಾಯಗೊಂಡಿದ್ದಾರೆ ಎಂದು ಫ್ರಾನ್ಸ್ನ ಆಂತರಿಕ ಸಚಿವ ಜೆರಾಲ್ಡ್ ಡರ್ಮಾನಿಯನ್ ಟ್ವೀಟ್ ಮಾಡಿದ್ದಾರೆ.

Similar News