ಜೋಶಿಮಠದಿಂದ ಸೇನಾಪಡೆಗಳ ಸ್ಥಳಾಂತರ: ಜ.ಪಾಂಡೆ

ಸೇನಾ ಸನ್ನದ್ಧತೆಯ ಮೇಲೆ ಯಾವುದೇ ಪರಿಣಾಮವಾಗದು: ಸೇನಾ ವರಿಷ್ಠರ ಸ್ಪಷ್ಟನೆ

Update: 2023-01-12 15:05 GMT

ಹೊಸದಿಲ್ಲಿ, ಜ. 12: ಉತ್ತರಾಖಂಡದ ಕುಸಿಯುತ್ತಿರುವ ಪಟ್ಟಣವಾದ ಜೋಶಿಮಠದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಕೆಲವು ಭಾರತೀಯ ಸೈನಿಕರನ್ನು ಚೀನಾಕ್ಕೆ ತಾಗಿಕೊಂಡಿರುವ ಗಡಿನಿಯಂತ್ರಣ ರೇಖೆಯ ಸಮೀಪಕ್ಕೆ ಸ್ಥಳಾಂತರಿಸಲಾಗಿದೆಯೆಂದು ಸೇನಾ ವರಿಷ್ಠ ಜನರಲ್ ಮನೋಜ್ ಪಾಂಡೆ ಗುರುವಾರ ತಿಳಿಸಿದ್ದಾರೆ.

ಭೂಕುಸಿತದ ಭೀತಿಯ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಈ ಸೈನಿಕರನ್ನು ಸ್ಥಳಾಂತರಿಸಲಾಗಿದೆ. ಆದರೆ ಎಷ್ಟು ಮಂದಿ ಭಾರತೀಯ ಸೈನಿಕರನ್ನು ಸ್ಥಳಾಂತರಿಸಲಾಗಿದೆಯೆಂಬ ಪ್ರಶ್ನೆಗೆ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಆದರೆ,ಭೂಕುಸಿತದಿಂದಾಗಿ ಜೋಶಿಮಠದ ಸುತ್ತಮುತ್ತಲೂ ಇರುವ 20ಕ್ಕೂ ಅಧಿಕ ಸೇನಾ ಸಂಸ್ಥಾಪನೆಗಳಿಗೆ ಮಧ್ಯಮ ಮಟ್ಟದ ಇಲ್ಲವೇ ಅಲ್ಪ ಪ್ರಮಾಣ ಹಾನಿಯಾಗಿದೆ ಎಂದು ಅವರುಹೇಳಿದ್ದಾರೆ. ಅವರು ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಸೇನಾ ಕಾರ್ಯಾಚರಣೆಗಳ ಸ್ಥಿತಿಗತಿಕುರಿತ ತನ್ನ ವಾರ್ಷಿಕ ಭಾಷಣದಲ್ಲಿ ಈ ವಿಷಯವನ್ನು ತಿಳಿಸಿದರು.

‘‘ಒಂದು ವೇಳೆ ಅಗತ್ಯವುಂಟಾದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಸೇನಾಘಟಕಗಳನ್ನು ಸ್ಥಳಾಂತರಿಸಲು ನಾವು ಸಿದ್ಧವಿದ್ದೇವೆ.ಆದರೂಈ ಪ್ರದೇಶದಲ್ಲಿ ನಮ್ಮ ಕಾರ್ಯನಿರ್ವಹಣಾ ಸನ್ನದ್ಧತೆಯು ಅಬಾಧಿತವಾಗಿಯೇ ಉಳಿಯಲಿದೆ’’ ಎಂದು ಪಾಂಡೆ ತಿಳಿಸಿದರು..

ಜೋಶಿಮಠ ಪ್ರದೇಶವು, ಭಾರತೀಯ ಸೇನಾಪಡೆಯ ಪ್ರಮುಖ ದಂಡುಕೇಂದ್ರವಾಗಿದ್ದು,ಅಲ್ಲಿರುವ ಸೈನಿಕರನ್ನು ಚೀನಾಕ್ಕೆ ತಾಗಿಕೊಂಡಿರುವ3488 ಕಿ.ಮೀ. ವಿಸ್ತೀರ್ಣದ ಪ್ರದೇದ ರಕ್ಷಣೆಗಾಗಿ ನಿಯೋಜಿತವಾಗಿದೆ. ಈ ಪ್ರದೇಶದಲ್ಲಿ 20 ಸಾವಿರಕ್ಕೂ ಅಧಿಕ ಭಾರತೀಯ ಸೈನಿಕರು ಹಾಗೂ ಫಿರಂಗಿಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳು ಸೇರಿದಂತ ಸೇನಾ ಸಾಮಾಗ್ರಿಗಳನ್ನು ನೆಲೆಗೊಳಿಸಲಾಗಿದೆ.

ಈ ಮಧ್ಯೆ ಜೋಶಿಮಠ ಪ್ರದೇಶಲ್ಲಿರುವ ಜಲವಿದ್ಯುತ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀ.ಯ ಧಾರ್ಮಿಕ ನಾಯಕರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂವಿಚಾರಣೆಗೆ ಕೈಗೆತ್ತಿಕೊಂಡಿದೆ. ಜೋಶಿಮಠದ 600ಕ್ಕೂ ಅಧಿಕ ಮನೆಗಳಲ್ಲಿ ಬಿರುಕುಉಂಟಾಗಲು, ಕಟ್ಟಡಗಳು ಕುಸಿಯುತ್ತಿರುವುದಕ್ಕೆ ಎನ್ಟಿಪಿಸಿಎಲ್ ಸಂಸ್ಥೆಯ ಜಲವಿದ್ಯುತ್ಯೋಜನೆ ಮೂಲ ಕಾರಣವಾಗಿದೆಯೆಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.

Similar News