×
Ad

ಮುನ್ನಾರ್: ಈ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ ಶೂನ್ಯಮಟ್ಟಕ್ಕೆ ಇಳಿದ ತಾಪಮಾನ

Update: 2023-01-12 20:42 IST

ಇಡುಕ್ಕಿ, ಜ.12: ಕೇರಳದ ಮುನ್ನಾರ್ ಜಿಲ್ಲೆಯಲ್ಲಿ ಬುಧವಾರ ತಾಪಮಾನವು, ಈ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ ಶೂನ್ಯಮಟ್ಟಕ್ಕೆ ಉಳಿದಿದೆ. ಮುನ್ನಾರ್ನ ಆಸುಪಾಸಿನ ಪ್ರದೇಶಗಳಾದ ಚೆಂಡುವಾರಾ ಹಾಗೂ ವಟ್ಟವಡದಲ್ಲೂ ತೀವ್ರವಾದ ಚಳಿಯ ಅನುಭವವಾಗಿದೆ.

ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಮುಂಜಾನೆಯವರೆಗೆ ಅತ್ಯಂತ ಶೀತದ ವಾತಾವರಣವಿತ್ತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಮುನ್ನಾರ್ನಲ್ಲಿ ಡಿಸೆಂಬರ್ ತಿಂಗಳಲ್ಲಿ ಶೂನ್ಯ ಡಿಗ್ರಿತಾಪಮಾನ ದಾಖಲಾಗುತ್ತದೆ. ಆದರೆ ಈ ವರ್ಷ ಇದೇ ಅವಧಿಯಲ್ಲಿ ಮಳೆ ಬಿದ್ದಕಾರಣ ತಾಪಮಾನವು ಸಾಮಾನ್ಯವಾಗಿತ್ತು. ಪ್ರಸಕ್ತ ಚಳಿಗಾಲದ ಋತುವಿನಲ್ಲಿ ಮುನ್ನಾರ್ ತೀವ್ರವಾದ ಚಿಳಿಯಿಂದ ಬಾಧಿತವಾಗಿರುವುದು ಇದೇ ಮೊದಲ ಸಲವಾಗಿದೆ ಎಂದರು.

ಕನ್ನಿಮಲ, ಚೆಂಡುವಾರಾ, ತಿಚುವಾರಾ, ಎಲ್ಲಾಪೆಟ್ಟಿ, ಲಕ್ಷ್ಮಿ, ಸೇವನ್ಮಾಲಾ ಹಾಗೂ ಲೋಕಾಟ್ ಸೇರಿದಂತೆ ಮುನ್ನಾರ್ನ ಹಲವಾರು ಪ್ರದೇಶಗಳಲ್ಲಿ ಮೈನಸ್ ಒಂದು ಡಿಗ್ರಿ ತಾಪಮಾನ ವರದಿಯಾಗಿವೆ.
ಮೈನಸ್ ಡಿಗ್ರಿ ತಾಪಮಾನಕ್ಕೆ ಸಾಕ್ಷಿಯಾಗಿರುವ ಮುನ್ನಾರ್ನ ಕಡುಚಳಿಯನ್ನು ಆನಂದಿಸಲು ಭಾರೀ ಸಂಖ್ಯೆಯ ಪ್ರವಾಸಿಗರು ಮುನ್ನಾರ್ಗೆ ಧಾವಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

Similar News