ಹೆಬ್ರಿ: ಗೋ ಸಾಗಾಟದ ವಾಹನ ಅಪಘಾತ; ಆರೋಪಿಗಳು ಪರಾರಿ

Update: 2023-01-12 18:14 GMT

ಹೆಬ್ರಿ: ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ತಪ್ಪಿಸಿಕೊಳ್ಳುವ ಆತುರದಲ್ಲಿ ವೇಗವಾಗಿ ಚಲಾಯಿಸಿದ ಬೊಲೆರೋ ವಾಹನ ಮರಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದ್ದು, ವಾಹನದಲ್ಲಿ ಐದು ಜಾನುವಾರುಗಳು ಪತ್ತೆಯಾಗಿವೆ. ಅದರಲ್ಲಿದ್ದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಹೆಬ್ರಿ ಠಾಣೆ ಉಪನಿರೀಕ್ಷಕ ಸುದರ್ಶನ್ ದೊಡಮನಿ ಅವರು ಜ.12ರಂದು ಮುಂಜಾನೆ ಹೆಬ್ರಿಯ ಸೀತಾನದಿ ಕೈಕಂಬದ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ನಾಡ್ಪಾಲು ಕಡೆಯಿಂದ ಬಂದ ಮಹೀಂದ್ರಾ ಬೊಲೆರೋ ವಾಹನವನ್ನು ನಿಲ್ಲಿಸದಿದ್ದಾಗ ಪೊಲೀಸರು ಬೆನ್ನಟ್ಟಿದ್ದು ಈ ಸಂದರ್ಭದಲ್ಲಿ ಘಟನೆ ನಡೆದಿದೆ.

ಬೊಲೆರೋವನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News