ಮಂಗಳೂರು ವೆಲ್ಫೇರ್ ಅಸೋಸಿಯೇಷನ್: ಅಧ್ಯಕ್ಷ ರಾಗಿ ಯೂಸುಫ್ ಕಾರ್ದಾರ್ ಆಯ್ಕೆ
Update: 2023-01-13 11:05 IST
ಮಂಗಳೂರು, ಜ.12: ಮಂಗಳೂರು ವೆಲ್ಫೇರ್ ಅಸೋಸಿಯೇಷನ್ (ಶಾದಿ ಮಹಲ್) ಬೋಳಾರ ಇದರ ವಾರ್ಷಿಕ ಮಹಾಸಭೆಯು ಗುರುವಾರ ಶಾದಿಮಹಲ್ ನಲ್ಲಿ ನಡೆಯಿತು.
ಸಭೆಯಲ್ಲಿ 2023-24ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷ ರಾಗಿ ಯೂಸುಫ್ ಕಾರ್ದಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಸ್.ಎ.ಖಲೀಲ್ ಮತ್ತು ಮಕ್ಬೂಲ್ ಅಹ್ಮದ್, ಕಾರ್ಯದರ್ಶಿಯಾಗಿ ಮೆಹಫೂಸ್ ಉರ್ ರೆಹಮಾನ್, ಜತೆ ಕಾರ್ಯದರ್ಶಿಯಾಗಿ ಆಬಿದ್ ಅಸ್ಘರ್ ಮತ್ತು ಝಾಹೀದ್ ಅದಮ್, ಖಜಾಂಚಿಯಾಗಿ ಆಸಿಫ್ ಶರ್ಫುದ್ದೀನ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ 10 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.