'BCCI ನಲ್ಲಿ ಕೆಲಸ ಮುಗಿಸಿದ್ದೇನೆ': ವಿದೇಶದಲ್ಲಿ ಅವಕಾಶಕ್ಕಾಗಿ ಹುಡುಕಾಡುತ್ತಿರುವ ಭಾರತದ ಬ್ಯಾಟರ್ ಮುರಳಿ ವಿಜಯ್

ಭಾರತದಲ್ಲಿ 30ರ ಹರೆಯದ ನಂತರ ಜನರು 80 ವರ್ಷ ವಯಸ್ಸಿನವರಂತೆ ನೋಡುತ್ತಾರೆ ಎಂದ ಕ್ರಿಕೆಟಿಗ

Update: 2023-01-14 10:27 GMT

ಚೆನ್ನೈ: ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್( Murali Vijay) ತನ್ನ  38 ವರ್ಷ ವಯಸ್ಸಿನಲ್ಲಿ ಕ್ರೀಡೆಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈಗ ವಿದೇಶದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

ವಿಜಯ್ ಕೊನೆಯದಾಗಿ 2018 ರಲ್ಲಿ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತಕ್ಕಾಗಿ ಆಡಿದ್ದರು. ಕಳಪೆ ಫಾರ್ಮ್‌ನ  ಬಳಿಕ ಅವರನ್ನು ತೆಗೆದುಹಾಕಲಾಯಿತು. ಆ ಬಳಿಕ ಅವರು ತಂಡಕ್ಕೆ ಹಿಂತಿರುಗಲಿಲ್ಲ. ರಣಜಿ ಟ್ರೋಫಿಯಲ್ಲಿ  ಅವರು 2019 ರಲ್ಲಿ ತಮಿಳುನಾಡು ಪರ ಕೊನೆಯ ಬಾರಿಗೆ ಆಡಿದ್ದರು. ವಿಜಯ್ ಅವರು ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ (TNPL) ಆಡಿದ ನಂತರ ಕಳೆದ ವರ್ಷದಿಂದ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಆಡಿಲ್ಲ.

“ನಾನು ಬಿಸಿಸಿಐನಲ್ಲಿ ಬಹುತೇಕ ಕೆಲಸ ಮುಗಿಸಿದ್ದೇನೆ ಹಾಗೂ ವಿದೇಶದಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದೇನೆ. ನಾನು ಸ್ಪರ್ಧಾತ್ಮಕ ಕ್ರಿಕೆಟ್ ಅನ್ನು ಸ್ವಲ್ಪಮಟ್ಟಿಗೆ ಆಡಲು ಬಯಸುತ್ತೇನೆ" ಎಂದು ವಿಜಯ್ ಬುಧವಾರದಂದು WV ರಾಮನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬಲಗೈ ಆಟಗಾರ ವಿಜಯ್  ಭಾರತ ಪರ 61 ಟೆಸ್ಟ್ ಪಂದ್ಯಗಳಲ್ಲಿ 3,928 ರನ್ ಹಾಗೂ  17 ಏಕದಿನ ಪಂದ್ಯಗಳಲ್ಲಿ 339 ರನ್ ಗಳಿಸಿದ್ದಾರೆ.  ಆಟಗಾರನ ವಯಸ್ಸಿಗೆ ತಕ್ಕಂತೆ ಮನಸ್ಥಿತಿಯಲ್ಲಿ ಬದಲಾವಣೆ ಅಗತ್ಯ ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ.

“ಭಾರತದಲ್ಲಿ 30 ರ ವಯಸ್ಸಿನ ನಂತರ ಜನರು ನಮ್ಮನ್ನು ಬೀದಿಯಲ್ಲಿ ನಡೆಯುವ 80 ವರ್ಷ ವಯಸ್ಸಿನವರಂತೆ ನೋಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಮಾಧ್ಯಮಗಳೂ ಇದನ್ನು ವಿಭಿನ್ನವಾಗಿ ಹೇಳಬೇಕು. ನೀವು ನಿಮ್ಮ 30 ರ ಹರೆಯದಲ್ಲಿ ಉತ್ತುಂಗದಲ್ಲಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇದೀಗ ಇಲ್ಲಿ ಕುಳಿತುಕೊಂಡಿರುವಾಗ, ನಾನು ಅತ್ಯುತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ಅನಿಸುತ್ತದೆ. ಆದರೆ ದುರದೃಷ್ಟವಶಾತ್, ಅವಕಾಶಗಳು ಕಡಿಮೆ ಇದೆ. ನಾನು ಹೊರಗೆ ಅವಕಾಶಗಳನ್ನು ಹುಡುಕಬೇಕಾಗಿದೆ. ನಿಮ್ಮ ಹಿಡಿತದಲ್ಲಿರುವುದನ್ನು ನಿಯಂತ್ರಿಸಬಹುದು. ನಿಯಂತ್ರಿಸಲಾಗದ್ದನ್ನು ನಿಯಂತ್ರಿಸಲು ಅಸಾಧ್ಯ ಎಂದರು.

ಇದನ್ನೂ ಓದಿ: ಪ್ರಿಯಕರನ ಎದುರೇ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ; ಐವರು ಆರೋಪಿಗಳ ಬಂಧನ

Similar News