ಉಡುಪಿ: ಫ್ಲ್ಯಾಟ್‌ನಲ್ಲಿ ಬಾಲಕಿ ಆತ್ಮಹತ್ಯೆ
Update: 2023-01-15 15:53 IST
ಉಡುಪಿ: ಬಾಲಕಿಯೊಬ್ಬಳು ಪ್ಲ್ಯಾಟ್‌ನ ಬೆಡ್‌ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.14ರಂದು ಸಂಜೆ ವೇಳೆ ನಗರದ ಬ್ರಹ್ಮಗಿರಿಯಲ್ಲಿ ನಡೆದಿದೆ.
ಮೃತರನ್ನು ಬ್ರಹ್ಮಗಿರಿ ಸಾಯಿರಾಧ ಫ್ರೈಡ್ ವಸತಿ ಸಮುಚ್ಛಯದ ನಿವಾಸಿ ಪ್ರವೀಣ್ ಶೆಟ್ಟಿ ಎಂಬವರ ಮಗಳು ಮಂಗಳದೇವಿ(11) ಎಂದು ಗುರುತಿಸಲಾಗಿದೆ.
ಕುಂಜಾರುಗಿರಿ ಆನಂದತೀರ್ಥ ಶಾಲೆಯ ಆರನೆ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆಗೆ ಯೂಟ್ಯೂಬ್‌ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸವನ್ನು ಹೊಂದಿದ್ದರು ಎನ್ನಲಾಗಿದೆ. ಇದೇ ಪ್ರಭಾವದಿಂದ ಈಕೆ ಮನೆಯ ಬೆಡ್‌ರೂಮ್‌ನ ಬಾತ್ ರೂಮಿನಲ್ಲಿ ಬಟ್ಟೆ ಇಡುವ ರಾಡ್‌ಗೆ ಚೂಡಿದಾರ ಶಾಲು ಕಟ್ಟಿ ಪ್ರಯೋಗ ಮಾಡಲು ಹೋಗಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಇನ್ನಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.