5 ವರ್ಷಗಳಲ್ಲಿ ಗುಜರಾತ್‌ನಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ. 50ರಷ್ಟು ಏರಿಕೆ

Update: 2023-01-16 12:08 GMT

ಅಹ್ಮದಾಬಾದ್:‌ ಗುಜರಾತ್‌ನಲ್ಲಿ (Gujarat) ಕಳೆದ ಐದು ವರ್ಷಗಳಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ (suicide) ಪ್ರಮಾಣ ಶೇ 50.44 ರಷ್ಟು ಏರಿಕೆಯಾಗಿದೆ ಎಂಬ ಅಂಶ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಖಾತೆ ಸಚಿವ ನಿತ್ಯಾನಂದ ರೇ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

2017 ರಲ್ಲಿ ರಾಜ್ಯದಲ್ಲಿ 2,131 ದಿನಗೂಲಿ ಕಾರ್ಮಿಕರು ಆತ್ಮಹತ್ಯೆಗೈದಿದ್ದಾರೆ. ಪ್ರತಿ ದಿನವೊಂದರಲ್ಲಿ ಆರು ಕಾರ್ಮಿಕರು ಆತ್ಮಹತ್ಯೆಗೈದಿದ್ದಾರೆಂದು ಇದರಿಂದ ತಿಳಿಯುತ್ತದೆ. 2018 ರಲ್ಲಿ ಈ ಸಮಖ್ಯೆ 2,522 ಗೆ  ಅಂದರೆ ಶೇ 18.34 ರಷ್ಟು ಏರಿಕೆಯಾಗಿದೆ. 2019 ರಲ್ಲಿ ರಾಜ್ಯದಲ್ಲಿ 2,649 ದಿನಗೂಲಿ ಕಾರ್ಮಿಕರು ಮೃತಪಟ್ಟಿದ್ದರೆ 2020 ಹಾಗೂ 2021 ರಲ್ಲಿ 2,754 ಹಾಗೂ 3206 ಮಂದಿ ಆತ್ಮಹತ್ಯೆಗೈದಿದ್ದಾರೆ.

ಗುಜರಾತ್‌ನಲ್ಲಿ  ಸರಾಸರಿ ದಿನಗೂಲಿ  ಭಾರತದಲ್ಲಿ ಕನಿಷ್ಠವಾಗಿದೆ. ಇಲ್ಲಿ ಕಾರ್ಮಿಕರು ಪ್ರತಿದಿನ ರೂ 295.9 ವೇತನ ಪಡೆಯುತ್ತಿದ್ದರೆ ಕೇರಳದಲ್ಲಿ ಅದು ರೂ 837.7, ತಮಿಳುನಾಡಿನಲ್ಲಿ ರೂ 478.6, ಜಮ್ಮು ಕಾಶ್ಮೀರದಲ್ಲಿ ರೂ 519, ಹಿಮಾಚಲ ಪ್ರದೇಶದಲ್ಲಿ ರೂ 462, ಬಿಹಾರದಲ್ಲಿ ರೂ 328.3 ಆಗಿದೆ.

ಇದನ್ನೂ ಓದಿ: ಶತಕೋಟ್ಯಧಿಪತಿಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿದರೂ ಎರಡು ಶತಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಬಹುದು: ವರದಿ

Similar News