ಚಂಡಿಗಢದಲ್ಲಿ ಮೇಯರ್ ಸ್ಥಾನಕ್ಕೆ ಚುನಾವಣೆ: ಆಪ್ ಅನ್ನು 1 ಮತದಿಂದ ಸೋಲಿಸಿದ ಬಿಜೆಪಿ

Update: 2023-01-17 16:29 GMT

ಚಂಡಿಗಢ, ಜ. 17: ಚಂಡಿಗಢ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅನೂಪ್ ಗುಪ್ತಾ(Anoop Gupta) ಅವರು ಆಮ್ ಆದ್ಮಿ ಪಕ್ಷದ ಜಸ್ಬೀರ್ ಸಿಂಗ್(Jasbir Singh) ಅವರನ್ನು ಒಂದು ಮತದ ಅಂತರದಿಂದ ಸೋಲಿಸಿ ಚಂಡಿಗಢದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 

ಗುಪ್ತಾ ಅವರು 15 ಮತಗಳನ್ನು ಪಡೆದಿದ್ದರೆ, ಜಸ್ಬೀರ್ ಸಿಂಗ್ ಅವರು 14 ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರು ಸದಸ್ಯರಿರುವ ಕಾಂಗ್ರೆಸ್ ಹಾಗೂ ಏಕೈಕ ಸದಸ್ಯ ಇರುವ ಶಿರೋಮಣಿ ಅಕಾಲಿ ದಳ ಚುನಾವಣೆಯಿಂದ ದೂರ ಉಳಿಯಲು ಬಯಸಿದ್ದರಿಂದ ಬಿಜೆಪಿ ಹಾಗೂ ಆಪ್ ನಡುವೆ ನೇರ ಸ್ಪರ್ಧೆ ನಿರೀಕ್ಷಿಸಲಾಗಿತ್ತು.

Similar News