ಜ. 22 - 26 : ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ

Update: 2023-01-17 18:25 GMT

ಕಾರ್ಕಳ: ಕಾರ್ಕಳದ ಸುಪ್ರಸಿದ್ದ ಕೈಸ್ತ ಶ್ರಧ್ದಾ ಕೇಂದ್ರ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಜನವರಿ 22 ರಿಂದ 26ರ ವರೆಗೆ ನಡೆಯಲಿದ್ದು, ಈ ಬಗ್ಗೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಅತೀ ವಂದನೀಯ ಆಲ್ವನ್ ಡಿಸೋಜಾ ಹೇಳಿದರು.  

ಅವರು ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ನೀವು ನನಗೆ ಸಾಕ್ಷಿಗಳಾಗುವಿರಿ-ಎಂಬ ಮಹೋತ್ಸವದ ಧ್ಯೇಯ ವಾಕ್ಯದೊಂದಿಗೆ ನಡೆಯುವ ಈ 5 ದಿನಗಳ ಉತ್ಸವದ ಅವಧಿಯಲ್ಲಿ ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ. ಜ. 22ರ ಪೂರ್ವಾಹ್ನ 10 ಗಂಟೆಗೆ ಕೊಂಕಣಿ ಉಡುಪಿಯ ಧರ್ಮಾಧ್ಯಕ್ಷ ಪರಮ ಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ, ಜ. 23ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡದಲ್ಲಿ ಪುತ್ತೂರಿನ ಧರ್ಮಾಧ್ಯಕ್ಷ ಪರಮ ಪೂಜ್ಯ ಜೀವರ್ಗಿಸ್ ಮಾರ್ ಮಕರಿಯೋಸ್ ಕಲಯಿಲ್, ಜ. 24ರಂದು ಸಂಜೆ 6.ಗಂಟೆಗೆ ಕನ್ನಡದಲ್ಲಿ ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮ ಪೂಜ್ಯ ಲೊರೆನ್ಸ್ ಮುಕ್ಕುಝಿ, ಜ. 25ರಂದು ಬೆಳಿಗ್ಗೆ 10 ಗಂಟೆಗೆ ಕೊಂಕಣಿಯಲ್ಲಿ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮ ಪೂಜ್ಯ ಆಲೋಷಿಯಸ್ ಪಾವ್ಲ್ ಡಿ’ಸೋಜಾ , ಜ. 26ರಂದು ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ಪರಮ ಪೂಜ್ಯ ಬರ್ನಾರ್ಡ್ ಮೊರಾಸ್ ಅವರು ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಿಸಲಿರುವರು. 

ಮಹೋತ್ಸವದ ದಿನಗಳಲ್ಲಿ ಪ್ರತಿದಿನ ಪೂರ್ವಾಹ್ನ 8-೦೦, 1೦-೦೦, 12-೦೦, ಅಪರಾಹ್ನ 2.೦೦, 4-೦೦, 6-೦೦, 8-೦೦ ಗಂಟೆಗೆ ಸೇರಿದಂತೆ 7 ಬಲಿಪೂಜೆಗಳು ನಡೆಯಲಿರುವುದು. ಜ. 21ರಂದು ಮಧ್ಯಾಹ್ನ 3.3೦ ಗಂಟೆಗೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಪರಮ ಪ್ರಸಾದದ ಮೆರವಣಿಗೆ ಇರಲಿರುವುದು ಎಂದು ಅವರು ತಿಳಿಸಿದರು

ಕನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ -1975 ರ ಅನ್ವಯ ಭಿಕ್ಷಾಟನೆ ಅಪರಾಧವಾಗಿರುವುದರಿಂದ ಜಾತ್ರಮಹೋತ್ಸವದ ಅಂತಿಮ ದಿನದಂದು ಭಿಕ್ಷುಕರಿಗೆ ನೀಡುತ್ತಿದ್ದ ಆಹಾರದ ಪೊಟ್ಟಣದ ಜೊತೆಗೆ ಹಣ(ಭಿಕ್ಷೆ)  ಕೈಬಿಡಲಾಗಿದೆ ಮಾಹಿತಿ ನೀಡಿದರು

ಬಸಿಲಿಕಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಪ್ರಧಾನ ಕಾರ್ಯದರ್ಶಿ ಬೆನೆಡಿಕ್ಟ್ ನೊರೋನ್ಹಾ ಉಪಸ್ಥಿತರಿದ್ದರು.

Similar News