ಇಂಡೋನೇಷ್ಯಾದಲ್ಲಿ ಮತ್ತೆ ಪ್ರಬಲ ಭೂಕಂಪ

Update: 2023-01-19 15:38 GMT

ಜಕಾರ್ತ,ಜ.18: ಇಂಡೊನೇಶ್ಯದ ಮಾಲುಕು ದ್ವೀಪಸ್ತೋಮದ ಸಾಗರಪ್ರದೇಶದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7 ತೀವ್ರತೆಯನ್ನು ಭೂಕಂಪವು ದಾಖಲಿಸಿತ್ತು.

ಭೂಕಂಪವಾಗುತ್ತಿದ್ದಂತೆಯೇ ಸುನಾಮಿ ಅಪ್ಪಳಿಸುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲಾಯಿತಾದರೂ ಆನಂತರ ಹಿಂತೆಗೆದುಕೊಳ್ಳಲಾಯಿತು ಎಂದು ಅಮೆರಿಕದ ಭೂಗೋಳ ಸರ್ವೇಕ್ಷಣಾ ಸಂಸ್ಥೆ (ಯುಎಸ್ಜಿಎಸ್) ತಿಳಿಸಿದೆ.

ಪೂರ್ವ ಇಂಡೋನೇಶ್ಯದ ದ್ವೀಪವಾದ ಹಾಲ್ಮಾಹೇರಾದ ವಾಯವ್ಯಕ್ಕೆ 150 ಕಿ.ಮೀ. ದೂರದ ಸಮುದ್ರಪ್ರದೇಶದಲ್ಲಿ 48 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದುವಿತ್ತೆಂದು ಅದು ತಿಳಿಸಿದೆ.ಸ್ಥಳೀಯ ಕಾಲಮಾನ ನಸುಕಿನಲ್ಲಿ 1:06 ವೇಳೆಗೆ ಭೂಕಂಪ ಸಂಭವಿಸಿದೆ.ಸುಮಾರು 15ರಿಂದ 20 ನಿಮಿಷಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

Similar News