×
Ad

ಸಹ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ: ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಕುಮಾರ್ ಪುತ್ರನ ವಿರುದ್ಧ ಪ್ರಕರಣ ದಾಖಲು

Update: 2023-01-18 10:11 IST

ಹೈದರಾಬಾದ್/ಹೊಸದಿಲ್ಲಿ: ಹೈದರಾಬಾದ್‌ನ ಖಾಸಗಿ ಕಾಲೇಜಿನಲ್ಲಿ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರನ ವಿರುದ್ಧ ನಿನ್ನೆ ಪ್ರಕರಣ ದಾಖಲಾಗಿದೆ.

ಹಲ್ಲೆ ನಡೆಸುತ್ತಿರುವ ವೀಡಿಯೊಗಳು ವೈರಲ್ ಆದ ನಂತರ ಇಬ್ಬರೂ ಅಧ್ಯಯನ ಮಾಡುತ್ತಿರುವ ಮಹೀಂದ್ರಾ ವಿಶ್ವವಿದ್ಯಾನಿಲಯವು ನೀಡಿದ ದೂರಿನ ಆಧಾರದ ಮೇಲೆ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ ಸಾಯಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ .

ಕಾಲೇಜು ಆವರಣದಲ್ಲಿ ಶ್ರೀರಾಮ್‌ಗೆ  ಭಗೀರಥ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ  ವೈರಲ್ ಆಗಿದೆ. ಭಗೀರಥನ ಸ್ನೇಹಿತನಾಗಿರುವ ಇನ್ನೊಬ್ಬ ವ್ಯಕ್ತಿಯೂ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.

ಎರಡನೇ ವೀಡಿಯೋದಲ್ಲಿ ಶ್ರೀರಾಮನ ಹಾಸ್ಟೆಲ್ ಕೊಠಡಿಯಲ್ಲಿ ಭಗೀರಥ ಹಾಗೂ ಇತರ ಐದಾರು ವಿದ್ಯಾರ್ಥಿಗಳು ನಿಂದಿಸಿದ್ದಲ್ಲದೆ ಥಳಿಸಿದ್ದಾರೆ. ಭಗೀರಥ ಇತರ ಸ್ನೇಹಿತರೊಂದಿಗೆ  ಶ್ರೀರಾಮನ ಮುಖಕ್ಕೆ ಗುದ್ದುತ್ತಿರುವುದು ಕಂಡು ಬಂದಿದೆ. ನಂತರ ಇತರರು ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಶ್ರೀರಾಮ ತನ್ನ ಸಹಪಾಠಿಯ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಭಗೀರಥ ಸಾಯಿ ಹೇಳಿಕೊಂಡಿದ್ದಾನೆ.

Similar News