×
Ad

ವಿಶ್ವದ ಅತ್ಯಂತ ಹಿರಿಯ ಮಹಿಳೆ, ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ನಿಧನ

Update: 2023-01-18 10:30 IST

ಪ್ಯಾರಿಸ್,ಜ.18: ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂದು ಪರಿಗಣಿಸಲಾಗಿರುವ ಫ್ರೆಂಚ್ ಕ್ರೈಸ್ತ ಸನ್ಯಾಸಿನಿ ಲೂಸಿಲೆ ರ್ಯಾಂಡೊನ್ ತನ್ನ 119ನೇ ಜನ್ಮದಿನಾಚರಣೆಗೆ ಕೆಲವೇ ವಾರಗಳ ಮೊದಲು ನಿಧನರಾಗಿದ್ದಾರೆ.
 
ಸಿಸ್ಟರ್ ಆ್ಯಂಡ್ರೆ ಎಂದೇ ಜನಪ್ರಿಯರಾದ ಲೂಸಿಲೆ ರ್ಯಾಂಡೊನ್ ಅವರು 1904ರ ಫೆಬ್ರವರಿ 11ರಂದು ದಕ್ಷಿಣ ಫ್ರಾನ್ಸ್ನ ಆ್ಯಲೆಸ್ ಪಟ್ಟಣದಲ್ಲಿ ಜನಿಸಿದ್ದರು. ಕೋವಿಡ್19 ಸಾಂಕ್ರಾಮಿಕದ ಹಾವಳಿಯಲ್ಲಿ ಬದುಕುಳಿದ ವಿಶ್ವದ ಅತ್ಯಂತಹಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಅವರೂ ಒಬ್ಬರಾಗಿದ್ದರು.
   
ಲೂಸಿಲೆ ರ್ಯಾಂಡೊನ್ ಅವರು ಟೌಲೊನ್ ಪಟ್ಟಣದಲ್ಲಿರುವ ಸೈಂಟ್-ಕ್ಯಾಥರಿನ್-ಲೆಬೋರ್ ನರ್ಸಿಂಗ್ ಹೋಮ್ನಲ್ಲಿ ಮಂಗಳವಾರ ಮುಂಜಾನೆ 2:00 ಗಂಟೆ ವೇಳೆಗೆ ಕೊನೆಯಸಿರೆಳೆದರು ಎಂದು ಆಸ್ಪತ್ರೆಯ ವಕ್ತಾರ ಡೇವಿಡ್ ಟ್ಯಾವೆಲ್ಲಾ ತಿಳಿಸಿದ್ದಾರೆ.
   
110 ಅಥವಾ ಅದಕ್ಕಿಂತ ಹಿರಿಯ ವಯಸ್ಸಿನ ವ್ಯಕ್ತಿಗಳ ವಿವರಗಳ ಮೌಲ್ಯಮಾಪನ ನಡೆಸುವ ಜೆರೋಂಟೊಲಜಿ ರಿಸರ್ಚ್ ಗ್ರೂಪ್, ರ್ಯಾಂಡೊನ್ ಅವರನ್ನು ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂದು ಮಾನ್ಯ ಮಾಡಿತ್ತು. ಜಪಾನ್ನ ಮಹಿಳೆ ಕಾನೆ ತನಾಕಾ ಅವರು 119ನೇ ವಯಸ್ಸಿನಲ್ಲಿ ನಿಧನರಾದ ಬಳಿಕ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಮಹಿಳೆಯೆಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದರು.
 
ರ್ಯಾಂಡೊನ್ ನಿಧನದ ಬಳಿಕ ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆಯು ಸ್ಪೇನ್ನಲ್ಲಿ ನೆಲೆಸಿರುವ ಅಮೆರಿಕ ಸಂಜಾತ 115 ವರ್ಷ ವಯಸ್ಸಿನ ಮಹಿಳೆ ಮಾರಿಯಾ ಬ್ರಾನ್ಯಾಸ್ ಮೊರೆರಾ ಅವರ ಪಾಲಾಗಿದೆ 

Similar News