ಮೇಘಾಲಯ, ನಾಗಲ್ಯಾಂಡ್‌ ಮತ್ತು ತ್ರಿಪುರಾದ ಚುನಾವಣಾ ದಿನಾಂಕ ಪ್ರಕಟ

Update: 2023-01-18 10:48 GMT

ಹೊಸದಿಲ್ಲಿ: ಮೇಘಾಲಯ, ನಾಗಲ್ಯಾಂಡ್‌ ಹಾಗೂ ತ್ರಿಪುರಾ ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗದ ಮುಖ್ಯಸ್ಥರು ಇಂದು ಪ್ರಕಟಿಸಿದ್ದಾರೆ. ತಲಾ 60 ಸ್ಥಾನಗಳನ್ನು ಹೊಂದಿರುವ ಮೂರು ಅಸೆಂಬ್ಲಿಗಳ ಅವಧಿಯು ಕ್ರಮವಾಗಿ ಮಾರ್ಚ್ 12, 15 ಮತ್ತು 22 ಕ್ಕೆ ಕೊನೆಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ತ್ರಿಪುರಾ ಚುನಾವಣೆಯು ಎರಡು ಹಂತದಲ್ಲಿ ನಡೆಯಲಿದ್ದು, ಒಂದನೇ ಹಂತವು ಫೆಬ್ರವರಿ 16 ಹಾಗೂ 2ನೇ ಹಂತವು ಫೆಬ್ರವರಿ 27ಕ್ಕೆ ನಿಗದಿಪಡಿಸಲಾಗಿದೆ.

ನಾಗಾಲ್ಯಾಂಡ್‌ ನಲ್ಲಿ ಫೆಬ್ರವರಿ 27 ಹಾಗೂ ಮೇಘಾಲಯದಲ್ಲೂ ಫೆ.27ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.

ಮಾರ್ಚ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಕಳೆದ ವಾರ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯೆಲ್ ಅವರು ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಮೂರು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದರು. ಪಿಟಿಐ ವರದಿಯ ಪ್ರಕಾರ, ಮಂಡಳಿ ಪರೀಕ್ಷೆಗಳು ಮತ್ತು ಭದ್ರತಾ ಪಡೆಗಳ ಚಲನವಲನವನ್ನು ಗಮನದಲ್ಲಿಟ್ಟುಕೊಂಡು ಮೂರು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ನಿರ್ಧರಿಸಲಾಗುತ್ತದೆ.

Similar News