ಭಟ್ಕಳ: ಹಳಿ ದಾಟುತ್ತಿದ್ದಾಗ ರೈಲು ಬಡಿದು ಮಹಿಳೆ ಸಾವು

Update: 2023-01-18 18:15 GMT

ಭಟ್ಕಳ: ರೈಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ  ಮಹಿಳೆಯೊಬ್ಬರು ರೈಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಯಲ್ವಡಿಕವೂರ್ ಎಂಬಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಯಲ್ವಡಿಕವೂರ್ ನಿವಾಸಿ ಈರಮ್ಮ ನಾಯ್ಕ(65) ಎಂದು ಗುರುತಿಸಲಾಗಿದೆ.

ಇವರು  ಗದ್ದೆ ಕೆಲಸವನ್ನು ಮುಗಿಸಿಕೊಂಡು ಕೊಂಕಣ ರೈಲ್ವೆ ಟ್ರ‍್ಯಾಕ್ ದಾಟುತ್ತಿದ್ದ  ವೇಳೆ ಮಹಿಳೆಗೆ ರೈಲು ಬಡಿದೆ ಎನ್ನಲಾಗಿದೆ. 

ಈ ಬಗ್ಗೆ ಮೃತ ಮಹಿಳೆಯ ಮಗ ಚಿಕ್ಕಯ್ಯ ನಾಯ್ಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ದೂರನ್ನು ದಾಖಲಿಸಿ ಕೊಂಡ ಪಿ.ಎಸ್.ಐ ಭರತಕುಮಾರ ತನಿಖೆ ಕೈಗೊಂಡಿದ್ದಾರೆ.

Similar News