ಭಟ್ಕಳ: ರಾಜ್ಯದಲ್ಲಿ ಸಂಪೂರ್ಣ ಮಧ್ಯ ನಿಷೇಧಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

Update: 2023-01-19 13:31 GMT

ಭಟ್ಕಳ: ಅಬಕಾರಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಯುವ ಪೀಳಿಗೆಯನ್ನು ಮಧ್ಯ ವ್ಯಸನಕ್ಕೆ ತಳ್ಳುತ್ತಿರುವ ಕ್ರಮ ಖಂಡನೀಯವಾಗಿದ್ದು ರಾಜ್ಯದಲ್ಲಿ ಸಂಪೂರ್ಣ ಮಧ್ಯೆ ನಿಷೇಧವಾಗಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್ ಆಗ್ರಹಿಸಿದರು.

ಅವರು ಗುರುವಾರ ನಗರದ ಶಮ್ಸುದ್ದೀನ್ ವೃತ್ತದ ಬಳಿ ಇರು ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.

ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು, ಯುವಕರನ್ನು ವ್ಯಸನಕ್ಕೆ ದೂಡಿ ಅರಾಜಕತೆ ಸೃಷ್ಟಿಸುವ ಹುನ್ನಾರಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಿರ್ವವಾಗಿ ವಿರೋಧಿಸುತ್ತದೆ ಎಂದ ಅವರು, ಸರ್ಕಾರವು ತೆಗೆದುಕೊಳ್ಳುವ ನಿರ್ಣಯಗಳು ಸಮಾಜದ ಹಿತ ಕಾಪಾಡುವಂತಿರಬೇಕು. ಸಮಾಜವನ್ನು ಹಾಳುವ ನಿರ್ಣಯಗಳು ತೆಗೆದುಕೊಂಡು ಇಡೀ ದೇಶದಲ್ಲೇ ನಮ್ಮ ರಾಜ್ಯದ ಮಾನ ಹರಾಜು ಹಾಕುವ ಇಂತಹ ಸರ್ಕಾರದ ನೀತಿ ಖಂಡನೀಯ. ಸರ್ಕಾರ ಯೋಚಿಸದೆ ಆತುರ ಆತುರದಲ್ಲಿ ಹಲವು ಬಾರಿ ತೆಗೆದುಕೊಂಡ ನಿರ್ಣಯಗಳನ್ನು ಬದಲಿಸಿದೆ. ಇದು ಸರ್ಕಾರದಲ್ಲಿರುವವರ ಕುರಿಂತೆ ಸಂದೇಹವನ್ನುಂಟು ಮಾಡುತ್ತಿದೆ ಎಂದರು. 

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಕುಡಿತ ಹಲವು ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ರಾಜ್ಯದಲ್ಲಿ ಸಂಪೂರ್ಣ ಮಧ್ಯ ನಿಷೇಧವಾಗಬೇಕು ರಾಜ್ಯದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ  ಜಿಲ್ಲಾರ್ಧಯಕ್ಷ ಫಾರೂಕ್ ಶೇಕ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಅಬ್ದುಲ್ ಮಾಜಿದ್ ಕೋಲಾ, ಜಹೂರ್ ಲಾಟ್, ಕಮ್ರುದ್ದೀನ್, ಸೇರಿದಂತೆ ಮುಂತಾದವರು ಇದ್ದರು.

Similar News