ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ, ಪೈಲಟ್ ಪರವಾನಗಿ 3 ತಿಂಗಳು ಅಮಾನತು

Update: 2023-01-20 08:24 GMT

ಹೊಸದಿಲ್ಲಿ: ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕುಡಿದ ಮತ್ತಿನಲ್ಲಿದ್ದ  ಪುರುಷ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜಿಸಿದ ಘಟನೆಗೆ ಸಂಬಂಧಿಸಿ ವಿಮಾನಯಾನ ನಿಯಂತ್ರಕ ಮಹಾನಿರ್ದೇಶಕರು ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ ವಿಧಿಸಿದ್ದಲ್ಲದೆ, ಏರ್  ಇಂಡಿಯಾದ (Air India)ನ್ಯೂಯಾರ್ಕ್-ದಿಲ್ಲಿ ವಿಮಾನದ ಪೈಲಟ್‌ನ ಪರವಾನಗಿಯನ್ನು 3 ತಿಂಗಳು ಅಮಾನತುಗೊಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಡಿಜಿಸಿಎ ನಾಗರಿಕ ವಿಮಾನಯಾನ ಅಗತ್ಯತೆಗಳ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಏರ್ ಇಂಡಿಯಾದ ಡೈರೆಕ್ಟರ್-ಇನ್-ಫ್ಲೈಟ್ ಸೇವೆಗಳಿಗೆ ಮೂರು ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಶಂಕರ್ ಮಿಶ್ರಾ ಎಂಬ ಪ್ರಯಾಣಿಕನ ಮೇಲೆ ಏರ್ ಇಂಡಿಯಾ ಗುರುವಾರ ನಾಲ್ಕು ತಿಂಗಳು ವಿಮಾನ ಸಂಚಾರಕ್ಕೆ ನಿಷೇಧವನ್ನು ವಿಧಿಸಿತ್ತು. ಈ ಹಿಂದೆ ಇದೇ  ವ್ಯಕ್ತಿಯ ಮೇಲೆ ವಿಧಿಸಿದ್ದ 30 ದಿನಗಳ ನಿಷೇಧಕ್ಕೆ ಹೆಚ್ಚುವರಿಯಾಗಿ ಈ ನಿಷೇಧ ಹೇರಲಾಗಿದೆ.

Similar News