ಕೋಟ ರಾ.ಹೆದ್ದಾರಿ ಸಮಸ್ಯೆ: ಡಿಸಿ, ಎಸ್ಪಿ ಭೇಟಿ

Update: 2023-01-20 10:45 GMT

ಕೋಟ, ಜ.20: ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ ಕೋಟ ಅಮೃತೇಶ್ವರಿ ದೇವಳದ ಎದುರಿನ ಜಂಕ್ಷನ್ ನಲ್ಲಿ ಸಾಕಷ್ಟು ಅಪಘಾತ ನಡೆಯುತ್ತಿದ್ದು, ಅಲ್ಲಿನ ರಸ್ತೆ ವಿಭಜಕ, ದಾರಿದೀಪ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಸಂಸ್ಥೆ ನವಯುಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜನಸಾಮಾನ್ಯರ, ವಾಹನ ಸವಾರರ ಭವಣೆ ನಿವಾರಿಸಬೇಕು, ಮುಂದಿನ ದಿನಗಳಲ್ಲಿ ಹೆದ್ದಾರಿ ನಿರ್ವಹಣೆಯಲ್ಲಿ ಯಾವುದೇ ಲೋಪವಾಗಬಾರದು. ಅಮೃತೇಶ್ವರಿ ಜಂಕ್ಷನ್ ಬಳಿ ವಿಭಜಕಕ್ಕೆ ಸಿಮೆಂಟ್ ಗೊಡೆ ನಿರ್ಮಾಣ, ಸರ್ವಿಸ್ ರಸ್ತೆಗೆ ಎರಡು ದಿಕ್ಕಿನಲ್ಲಿ ಹಂಪ್ ಅಳವಡಿಕೆ, ಸಮರ್ಪಕ ದಾರಿದೀಪ ಅಳವಡಿಸುವಂತೆ ಅವರು ತಿಳಿಸಿದರು.

Similar News