​ಶಿಕ್ಷಣದ ವ್ಯಾಪರೀಕರಣದಿಂದ ಅಪರಾಧಗಳ ಹೆಚ್ಚಳ: ಚಂದ್ರಶೇಖರ್ ಶೆಟ್ಟಿ

Update: 2023-01-20 14:36 GMT

ಉಡುಪಿ: ಇಂದು ಶಿಕ್ಷಣ ವ್ಯವಸ್ಥೆ ವ್ಯಾಪರೀಕರಣಗೊಂಡಿದೆ. ಇದರ ಪರಿಣಾಮ ಸಮಾಜದಲ್ಲಿ ಭ್ರಷ್ಟಚಾರ, ಕೊಲೆಗಳಂತಹ ಅಪರಾಧಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ಓದಿನ ಜತೆಗೆ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ರಾಷ್ಟ್ರಪ್ರೇಮ ಚಿಂತನೆ ಮೈಗೂಡಿಸಿಕೊಂಡು ಸಮಾಜದ ಉನ್ನತಿಗಾಗಿ ದುಡಿಯಬೇಕು ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್., ಮಂಗಳೂರು ಎಬಿವಿಪಿ ವಿಭಾಗ ಸಹ ಪ್ರಮುಖ್ ಕಿರಣ್ ಕುಂದಾಪುರ, ಜಿಲ್ಲಾ ಪ್ರಮುಖ್ ರಾಜಶೇಖರ್, ಪ್ರಾಂತ ಕಾರ್ಯಕಾರಣಿ ಶ್ರೀನಿತ್ಯ ಉಪಸ್ಥಿತರಿದ್ದರು.

ಉಡುಪಿ ಟಿಎಂಎ ಪೈ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ದಿನೇಶ್ ಎಂ.ನಾಯಕ್, ಲಕ್ಷ್ಮೀನಾರಾಯಣ ಮಟ್ಟು ಧ್ವಜಾರೋಹಣ ನೆರವೇರಿಸಿ, ಪ್ರದರ್ಶಿನಿ ಉದ್ಘಾಟಿಸಿದರು. ಶಿವಾನಿ ಡಯಾಗ್ನೋಸ್ಟಿಕ್‌ನ ನಿರ್ದೇಶಕ ಡಾ.ಶಿವಾನಂದ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀವತ್ಸ ಸ್ವಾಗತಿಸಿದರು. ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮಲ್ಪೆ ವಿಶೇಷ ಉಪನ್ಯಾಸ ನೀಡಿದರು. ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಉಪಸ್ಥಿತ ರಿದ್ದರು. ಅನಂತರ ಪುರಭವನದಿಂದ ಬೋರ್ಡ್ ಹೈಸ್ಕೂಲ್‌ವರೆಗೆ ಶೋಭಾ ಯಾತ್ರೆ ಜರಗಿತು.

Similar News

ನಾಪತ್ತೆ