ನ್ಯೂಝಿಲ್ಯಾಂಡ್ ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಪಿನ್ಸ್ ಆಯ್ಕೆ ಸಾಧ್ಯತೆ

Update: 2023-01-21 05:28 GMT

ಸಿಡ್ನಿ:ನ್ಯೂಝಿಲ್ಯಾಂಡ್ ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಪಿನ್ಸ್ ಆಯ್ಕೆಯಾಗುವ ಸಾಧ್ಯತೆಯಿದೆ. ಪ್ರಧಾನಿ ಹುದ್ದೆಗೆ ಸಂಸದರಿಂದ ಏಕೈಕ ನಾಮಪತ್ರ ಸ್ವೀಕರಿಸಲಾಗಿದೆ ಎಂದು ಆಡಳಿತಾರೂಢ ಲೇಬರ್ ಪಕ್ಷದ ಮೂಲಗಳು ತಿಳಿಸಿವೆ.

42 ವರ್ಷದ ಜಸಿಂಡಾ ಆರ್ಡರ್ನ್ ಅವರು ಗುರುವಾರ ದಿಢೀರ್ ರಾಜೀನಾಮೆ ಘೋಷಣೆ ಮಾಡಿದ ನಂತರ ಪ್ರಧಾನಿ ಹುದ್ದೆ ತೆರವಾಗಿತ್ತು.

ಹಿಪ್ಪಿನ್ಸ್ ಅವರು ಜಸಿಂಡಾ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು,. ಲಾಕ್ ಡೌನ್ ಸಮಯದಲ್ಲಿ ಅವರ ಕಾರ್ಯನಿರ್ವಹಣೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ದೇಶದ 41 ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು 44 ವರ್ಷದ ಹಿರಿಯ ರಾಜಕಾರಣಿ ಹಿಪ್ಪಿನ್ಸ್ ಗೆ  ರವಿವಾರ ಸಂಸತ್ತಿನ ಲೇಬರ್ ಪಾರ್ಟಿಯ  ಸದಸ್ಯರು ಔಪಚಾರಿಕವಾಗಿ ಬೆಂಬಲಿಸಬೇಕು.

ಅಕ್ಟೋಬರ್ 14 ರಂದು ನ್ಯೂಝಿಲ್ಯಾಂಡ್ ನಲ್ಲಿ ಸಾರ್ವತ್ರಿಕ ನಡೆಯಲಿದೆ.  ಬೆಲೆಏರಿಕೆ , ಬಡತನ ಮತ್ತು ಅಪರಾಧ ದರಗಳ ಬಗ್ಗೆ ಆಡಳಿತ ಪಕ್ಷದ ಟೀಕೆಗಳು ಕೇಳಿಬಂದಿದೆ.

Similar News