ಆನ್‌ಲೈನ್ ಹಗರಣಕ್ಕೆ ಬಲಿಯಾದ ಐಸಿಸಿ, ಸುಮಾರು 2.5 ಮಿಲಿಯನ್ ಡಾಲರ್ ನಷ್ಟ: ವರದಿ

Update: 2023-01-21 07:54 GMT

ದುಬೈ: ಸೈಬರ್ ಅಪರಾಧಕ್ಕೆ ಬಲಿಯಾದ ನಂತರ  ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC ) ಸುಮಾರು 2.5 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿದೆ ಎಂದು ವರದಿಯೊಂದು ತಿಳಿಸಿದೆ.

"ಹಣಕಾಸಿನ ಹಗರಣವನ್ನು ಮಾಡಲು ವಂಚಕರು ಬಳಸಿದ ಮಾರ್ಗವೆಂದರೆ ಬಿಸಿನೆಸ್  ಇ-ಮೇಲ್ ಕಾಂಪ್ರಮೈಸ್ (BEC), ಇದನ್ನು ಇ-ಮೇಲ್ ಅಕೌಂಟ್ ಕಾಂಪ್ರಮೈಸ್  ಎಂದೂ ಕರೆಯುತ್ತಾರೆ,  ಇದು  'ಆರ್ಥಿಕವಾಗಿ ಅತ್ಯಂತ ಹಾನಿಕಾರಕ ಆನ್‌ಲೈನ್ ಅಪರಾಧಗಳಲ್ಲಿ ಒಂದಾಗಿದೆ  ಎಂದು  ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ವಿವರಿಸುತ್ತದೆ ' ಎಂದು ವರದಿ ಹೇಳಿದೆ.

ಐಸಿಸಿ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲು ವಂಚಕರು ನಿಖರವಾಗಿ ಯಾವ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಅವರು ನೇರವಾಗಿ ದುಬೈನ ಮುಖ್ಯ ಕಚೇರಿಯಲ್ಲಿ ಯಾರನ್ನಾದರೂ ಸಂಪರ್ಕಿಸಿದ್ದರೆ ಅಥವಾ ಐಸಿಸಿ ಸಲಹೆಗಾರರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ.

Similar News