ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ 38 ಕಾಂಗ್ರೆಸ್ ಸದಸ್ಯರ ಅಮಾನತು
Update: 2023-01-21 21:06 IST
ಅಹ್ಮದಾಬಾದ್,ಜ.21: ಇತ್ತೀಚಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಕ್ಕಾಗಿ ತನ್ನ 38 ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಗುಜರಾತ್ ಕಾಂಗ್ರೆಸ್ ಆರು ವರ್ಷಗಳಿಗೆ ಅಮಾನತುಗೊಳಿಸಿದೆ. ಚುನಾವಣೆಯಲ್ಲಿ 182 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆದ್ದಿತ್ತು.
ಗುಜರಾತ್ ಕಾಂಗ್ರೆಸ್ ನ ಶಿಸ್ತು ಸಮಿತಿಯು ಈ ತಿಂಗಳಲ್ಲಿ ಎರಡು ಬಾರಿ ಸಭೆ ಸೇರಿದ್ದು,ಈವರೆಗೆ 95 ಜನರ ವಿರುದ್ಧ 71 ದೂರುಗಳನ್ನು ಸ್ವೀಕರಿಸಿದೆ ಎಂದು ಅದರ ಸಂಚಾಲಕ ಬಾಲುಭಾಯಿ ಪಟೇಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
38 ಜನರನ್ನು ಅಮಾನತುಗೊಳಿಸಲಾಗಿದ್ದು,ಇತರರ ವಿರುದ್ಧವೂ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಎಂಟು ಕಾರ್ಯಕರ್ತರಿಗೆ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದರು.