ಕಾಸರಗೋಡು: ತಾಯಿ, ಮಗಳ ಮೃತದೇಹ ಪತ್ತೆ

Update: 2023-01-22 19:19 GMT

ಕಾಸರಗೋಡು, ಜ.22: ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ರವಿವಾರ ರಾತ್ರಿ ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡಂಗುಯಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತರನ್ನು ಕುಂಡಂಗುಯಿ ನಿರ್ಕಾಯಿಯ ಚಂದ್ರವರವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12) ಎಂದು ಗುರುತಿಸಲಾಗಿದೆ.

ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾಳ ಮೃತದೇಹ ಕೋಣೆಯಲ್ಲಿ ಪತ್ತೆಯಾಗಿದೆಯೆನ್ನಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. 

Similar News