ಹಾಕಿ ವಿಶ್ವಕಪ್: ಜರ್ಮನಿ, ಕೊರಿಯಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಅರ್ಜೆಂಟೀನಕ್ಕೆ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು

Update: 2023-01-23 15:53 GMT

ಭುವನೇಶ್ವರ, ಜ.23: ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ಕ್ರಾಸ್ ಓವರ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಜರ್ಮನಿ ಹಾಗೂ ಕೊರಿಯಾ ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪಿವೆ.

ಜ.25ರಂದು ನಡೆಯುವ ಅಂತಿಮ-8ರ ಸುತ್ತಿನಲ್ಲಿ ಜರ್ಮನಿ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿದರೆ, ಕೊರಿಯಾ ತಂಡ ನೆದರ್‌ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

ಸೋಮವಾರ ನಡೆದ 3ನೇ ಕ್ರಾಸ್ ಓವರ್ ಪಂದ್ಯದಲ್ಲಿ ಜರ್ಮನಿ ತಂಡ ಫ್ರಾನ್ಸ್ ತಂಡವನ್ನು 5-1 ಅಂತರದಿಂದ ಸೋಲಿಸಿತು.
  
ಅರ್ಜೆಂಟೀನ ವಿರುದ್ಧದ 4ನೇ ಕ್ರಾಸ್ ಓವರ್ ಪಂದ್ಯದಲ್ಲಿ ಕೊರಿಯಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಅಂತರದಿಂದ ಸದೆ ಬಡಿಯಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ 5-5ರಿಂದ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಶೂಟೌಟ್ ಮೊರೆ ಹೋಗಲಾಯಿತು.

ಜ.24ರಂದು ಆಸ್ಟ್ರೇಲಿಯ-ಸ್ಪೇನ್ ಹಾಗೂ ಬೆಲ್ಜಿಯಮ್-ನ್ಯೂಝಿಲ್ಯಾಂಡ್ ನಡುವೆ ಕ್ವಾರ್ಟರ್ ಫೈನಲ್ ಫೈಟ್ ನಡೆಯಲಿದೆ.
 

Similar News