ಅಮೆರಿಕದ ನೈಟ್ ಕ್ಲಬ್ ನಲ್ಲಿ ಗುಂಡಿನ ದಾಳಿ: 12 ಮಂದಿಗೆ ಗಾಯ

Update: 2023-01-23 18:03 GMT

ನ್ಯೂಯಾರ್ಕ್, ಜ.23: ಆಗ್ನೇಯ ಅಮೆರಿಕದ ಲೂಸಿಯಾನ ರಾಜ್ಯದ ಬ್ಯಾಟನ್ ರೋಗ್ ನೈಟ್ ಕ್ಲಬ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ 12 ಮಂದಿ ಗಾಯಗೊಂಡಿದ್ದಾರೆ. ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದು ಗೊತ್ತುಗುರಿಯಿಲ್ಲದೆ ನಡೆಸಿರುವ ಹಿಂಸಾಚಾರವಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾರೋ ಒಬ್ಬರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದಾಗ ಅಲ್ಲಿದ್ದ ಹಲವರು ಗಾಯಗೊಂಡಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮುಖ್ಯಸ್ಥ ಮರ್ಫಿ ಪೌಲ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Similar News