×
Ad

ಹೈದರಾಬಾದ್ ವಿವಿ ಕ್ಯಾಂಪಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ದೂರು ದಾಖಲು

Update: 2023-01-24 10:31 IST

ಹೈದರಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಪ್ರಸಾರವನ್ನು ಕೇಂದ್ರವು ನಿರ್ಬಂಧಿಸಿದ ಕೆಲವು ದಿನಗಳ ನಂತರ, ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿವಾದಾತ್ಮಕ ಸೀರಿಸ್ ನ್ನು ಪ್ರದರ್ಶನ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

'ಇಂಡಿಯಾ ದಿ ಮೋದಿ ಕ್ವೆಶ್ಚನ್' ಎಂಬ ಶೀರ್ಷಿಕೆಯಡಿಯಲ್ಲಿ ಬ್ರಿಟಿಷ್ ರಾಷ್ಟ್ರೀಯ ಬ್ರಾಡ್‌ಕಾಸ್ಟರ್  ಸಾಕ್ಷ್ಯಚಿತ್ರವನ್ನು ರಚಿಸಿತ್ತು. ಶನಿವಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಯೂಟ್ಯೂಬ್‌ನಲ್ಲಿ ಸೀರಿಸ್ ನ್ನು  ನಿರ್ಬಂಧಿಸಿದೆ ಹಾಗೂ  ಬಿಬಿಸಿ  ಸಾಕ್ಷ್ಯಚಿತ್ರದ YouTube ಲಿಂಕ್‌ಗಳನ್ನು ನಿರ್ಬಂಧಿಸಿದೆ.

ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಆರೆಸ್ಸೆಸ್ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೋಮವಾರ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಮತ್ತೊಂದೆಡೆ, ವಿದ್ಯಾರ್ಥಿ ಸಂಘವು ಯಾವುದೇ 'ಅಕ್ರಮ ಅಥವಾ ತಪ್ಪು' ಮಾಡಿರುವುದನ್ನು ನಿರಾಕರಿಸಿದೆ.

ಅಲ್ಲದೆ, ಕೇಂದ್ರದ ಆದೇಶದ ಒಂದು ದಿನದ ನಂತರ ವಿದ್ಯಾರ್ಥಿಗಳು ರವಿವಾರ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿತ್ತು ಎಂದು ವಿಶ್ವವಿದ್ಯಾಲಯ ಹೇಳಿದೆ

ಮತ್ತೊಂದೆಡೆ,  ಸಾಕ್ಷ್ಯಚಿತ್ರದ  ಮೇಲಿನ ನಿಷೇಧಕ್ಕೆ  ಮೊದಲೇ ಎರಡು ದಿನಗಳ ಹಿಂದೆಯೇ  ಸ್ಕ್ರೀನಿಂಗ್ ಅನ್ನು ಆಯೋಜಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ,

ಗಚ್ಚಿಬೌಲಿ ಪೊಲೀಸರ ಪ್ರಕಾರ, ಸಾಕ್ಷ್ಯ ಚಿತ್ರದ ಸ್ಕ್ರೀನಿಂಗ್ ಬಗ್ಗೆ ಇನ್ನೂ ಯಾವುದೇ ದೂರು ಬಂದಿಲ್ಲ.

Similar News