​ಪರಿತ್ಯಕ್ತ ಪತ್ನಿಗೆ ಮಾಸಿಕ 50 ಸಾವಿರ ರೂ. ಜೀವನಾಂಶ ನೀಡಲು ಕ್ರಿಕೆಟಿಗ ಮುಹಮ್ಮದ್ ಶಮಿಗೆ ನ್ಯಾಯಾಲಯ ಆದೇಶ

Update: 2023-01-24 06:24 GMT

ಕೋಲ್ಕತಾ: ಪರಿತ್ಯಕ್ತ ಪತ್ನಿ ಹಸಿನಾ ಜಹಾನ್ (Hasin Jahan) ಮಾಸಿಕ 50,000 ರೂ. ಜೀವನಾಂಶ ನೀಡುವಂತೆ ಕೋಲ್ಕತ್ತಾ ನ್ಯಾಯಾಲಯವು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿಗೆ (Mohammed Shami) ಆದೇಶಿಸಿದೆ. 

ನಾಲ್ಕು ವರ್ಷಗಳ ಹಿಂದೆ ಜಹಾನ್ ಅವರು ಶಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು.

ನ್ಯಾಯಾಲಯ ನೀಡಿರುವ ಆದೇಶಕ್ಕೆ  ಜಹಾನ್  ಸಂತುಷ್ಟರಾಗಿಲ್ಲ. ಏಕೆಂದರೆ ಅವರು ಶಮಿಯಿಂದ  ತಿಂಗಳಿಗೆ 10 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.  2018 ರಲ್ಲಿ, ಜಹಾನ್ ಮಾಸಿಕ 10 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿ ಕಾನೂನು ಮೊಕದ್ದಮೆ ಹೂಡಿದ್ದರು, 

ಹೆಚ್ಚಿನ ಜೀವನಾಂಶ ಪಾವತಿಗಾಗಿ ಜಹಾನ್ ಈ ತೀರ್ಪನ್ನು ಪ್ರಶ್ನಿಸಿ  ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸೋಮವಾರ, ಜನವರಿ 23 ರಂದು ಅಲಿಪುರ ನ್ಯಾಯಾಲಯದ ನ್ಯಾಯಾಧೀಶರಾದ ಅನಿಂದಿತಾ ಗಂಗುಲಿ ಅವರು ಈ ತೀರ್ಪು ನೀಡಿದ್ದಾರೆ.

ಶಮಿ ವಿರುದ್ಧ  ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ  ಹಸಿನಾ ಜಹಾನ್  ಜಾದವ್ಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ ಬಳಿಕ ವೈವಾಹಿಕ ಕಲಹ  ಆರಂಭವಾಗಿತ್ತು. ದೂರಿನ ನಂತರ, ಶಮಿ ಮೇಲೆ ಕೌಟುಂಬಿಕ ದೌರ್ಜನ್ಯ ಹಾಗೂ  ಕೊಲೆ ಯತ್ನದ ಜಾಮೀನು ರಹಿತ ಆರೋಪಗಳನ್ನು ಹೊರಿಸಲಾಗಿತ್ತು.

ಇದನ್ನೂ ಓದಿ: ಎರಡು ಮಕ್ಕಳ ನೀತಿಯಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ; ಈ ವ್ಯಕ್ತಿ ಮಾಡಿದ್ದೇನು ಗೊತ್ತೇ?

Similar News