ಉತ್ತರಪ್ರದೇಶ: ಕುಸಿದು ಬಿದ್ದ ವಸತಿ ಕಟ್ಟಡ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

Update: 2023-01-24 16:41 GMT

 ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ  ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಬಿದ್ದಿದ್ದು, ಕಟ್ಟದ ಅವಶೇಷಗಳಡಿ ಎಂಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಮೂವರನ್ನು ರಕ್ಷಿಸಲಾಗಿದೆ ಎಂದು ndtv.com ವರದಿ ಮಾಡಿದೆ. ಅದಾಗ್ಯೂ, ಪತ್ರಕರ್ತ ಅರವಿಂದ ಚೌಹಾನ್‌ ಮಾಡಿರುವ ಟ್ವೀಟ್‌ ಪ್ರಕಾರ, ಅವಶೇಷಗಳಡಿಯಲ್ಲಿ 20-25 ಮಂದಿ ಸಿಲುಕಿದ್ದಾರೆ.  

ಯುಪಿ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು ಸ್ಥಳಕ್ಕೆ ಆಗಮಿಸಿದ್ದು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ತಂಡಗಳು ಮಾಡುತ್ತಿರುವ ರಕ್ಷಣಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

"ಕಟ್ಟಡವು ಇದ್ದಕ್ಕಿದ್ದಂತೆ ಕುಸಿದಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದಾರೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು   ಪಾಠಕ್ ಹೇಳಿದರು.

  ಉತ್ತರ ಭಾರತದ ಹಲವೆಡೆ ಹಿಂದಿನ ದಿನ ಭೂಕಂಪನ ವರದಿಯಾಗಿದ್ದು, ಅದರಿಂದ ಕಟ್ಟಡವು ದುರ್ಬಲಗೊಂಡಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Similar News