ಮಂಗಳೂರು: ಕೊಂಕಣ ಮಾರ್ಗದಲ್ಲಿ ವಿದ್ಯುದ್ದಿಕೃತ ರೈಲುಗಳ ಸಂಚಾರ ಆರಂಭ

Update: 2023-01-24 17:54 GMT

ಮಂಗಳೂರು: ಕೊಂಕಣ ಮಾರ್ಗದಲ್ಲಿ ಇಲೆಕ್ಟ್ರಿಕ್ ಇಂಜಿನ್‌ನ ಮತ್ತಷ್ಟು ರೈಲುಗಳು ಸಂಚಾರ ಆರಂಭಿಸಿವೆ ಎಂದು ಕೊಂಕಣ ರೈಲ್ವೆಯು ಪ್ರಕಟನೆ ತಿಳಿಸಿದೆ.

ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ಎರ್ನಾಕುಳಂ ಜಂಕ್ಷನ್-ಓಖಾ ಎಕ್ಸ್‌ಪ್ರೆಸ್ (16338/16337) ಜ.20ರಿಂದ ಎರ್ನಾಕುಳಂ ಜಂಕ್ಷನ್ ಮತ್ತು ಅಹ್ಮದಾಬಾದ್ ನಡುವೆ ಇಲೆಕ್ಟ್ರಿಕಲ್ ಇಂಜಿನ್‌ನಲ್ಲಿ ಸಂಚರಿಸುತ್ತಿವೆ.

ತಿರುವನಂತಪುರ ಸೆಂಟ್ರಲ್-ವೆರವಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (16334/16333) ತಿರುವನಂತಪುರ ಸೆಂಟ್ರಲ್ ಮತ್ತು ಅಹ್ಮದಾಬಾದ್ ಜಂಕ್ಷನ್ ನಿಲ್ದಾಣಗಳ ನಡುವೆ ಜ.23ರಿಂದ ಇಲೆಕ್ಟ್ರಿಕಲ್ ಇಂಜಿನ್‌ನಲ್ಲಿ ಸಂಚಾರ ಆರಂಭಿಸಿವೆ.

ನಾಗರಕೋಯಿಲ್- ಗಾಂಧಿಧಾಮ ಸಾಪ್ತಾಹಿಕ ಎಕ್ಸ್‌ಪ್ರೆಸ್ (16336/16335) ನಾಗರಕೋಯಿಲ್ ಮತ್ತು ಅಹ್ಮದಾಬಾದ್ ನಡುವೆ ಜ.24ರಿಂದ ಇಲೆಕ್ಟ್ರಿಕಲ್ ಇಂಜಿನ್‌ನಲ್ಲಿ  ಸಂಚರಿಸಲಿವೆ.

ಎರ್ನಾಕುಳಂ ಜಂಕ್ಷನ್-ಎಚ್ ನಿಜಾಮುದ್ದೀನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (22655/22656) ಜ.25ರಿಂದ ಪೂರ್ಣ ಓಡಾಟವನ್ನು ಇಲೆಕ್ಟ್ರಿಕಲ್ ಇಂಜಿನ್‌ನಲ್ಲಿ ಪೂರ್ಣಗೊಳಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.

Similar News