ಜನರು ದೂರದರ್ಶನವನ್ನು ನಂಬದೇ ಇದ್ದರೂ, BBCಯನ್ನು ನಂಬುತ್ತಾರೆ: ಪ್ರಧಾನಿ ಮೋದಿಯ ಹಳೆಯ ವೀಡಿಯೊ ವೈರಲ್

Update: 2023-01-25 12:35 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ ನ ಹತ್ಯಾಕಾಂಡದಲ್ಲಿ ಸಂದರ್ಭದಲ್ಲಿ ನಿರ್ವಹಿಸಿದ ಕಾರ್ಯವೈಖರಿ ಕುರಿತಾದಂತೆ ಬಿಬಿಸಿಯು ಸಾಕ್ಷ್ಯಚಿತ್ರ ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಭಾರತ ಆ ಡಾಕ್ಯುಮೆಂಟರಿಯನ್ನು ಯಾವುದೇ ಉತ್ತರ ನೀಡದೇ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪ್ರಧಾನಿ ಮೋದಿ ಬಿಬಿಸಿಯ ವಿಶ್ವಾಸಾರ್ಹತೆ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್‌ ಆಗುತ್ತಿದೆ. 

ಈ ವೀಡಿಯೊವನ್ನು ಸತ್ಯ ಪರಿಶೋಧನಕಾರ, ಆಲ್ಟ್‌ ನ್ಯೂಸ್‌ ನ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. 2013ರಲ್ಲಿ ನರೇಂದ್ರ ಮೋದಿ ಬಿಬಿಸಿಯನ್ನು ಹೊಗಳಿದ್ದ ವೀಡಿಯೊ ಸದ್ಯ ವೈರಲ್‌ ಆಗಿದೆ. "ಸಾಮಾನ್ಯ ಜನರು ಕೂಡಾ ನಾನಿದನ್ನು ಬಿಬಿಸಿಯಲ್ಲಿ ಕೇಳಿದ್ದೇನೆ ಅಂತ ಹೇಳುತ್ತಾರೆ. ನಮ್ಮದೇ ದೇಶದ ಆಲ್‌ ಇಂಡಿಯಾ ರೇಡಿಯೊ (ದೂರದರ್ಶನ)ವನ್ನು ಜನರು ನಂಬುವುದಿಲ್ಲ, ಪತ್ರಿಕೆಯನ್ನು ನಂಬುವುದಿಲ್ಲ. ಆದರೆ, ನಾನು ಬಿಬಿಸಿಯಲ್ಲಿ ಕೇಳಿದ್ದೇನೆ ಅಂತ ಹೇಳುತ್ತಾರೆ. ಈ ರೀತಿಯ ವಿಶ್ವಾಸಾರ್ಹತೆ ಇರಬೇಕು." ಎಂದು ವೀಡಿಯೋದಲ್ಲಿ ಪ್ರಧಾನಿ ಹೇಳಿದ್ದಾರೆ.

ಈ ವೀಡಿಯೊಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Similar News