74ನೇ ಗಣರಾಜ್ಯೋತ್ಸವ: ಕೀರ್ತಿಚಕ್ರ ಮತ್ತು ಶೌರ್ಯಚಕ್ರ ಪ್ರಶಸ್ತಿಗಳು ಪ್ರಕಟ
ಹೊಸದಿಲ್ಲಿ,ಜ.25: 74ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತೀಯ ಸೇನಾಪಡೆಗಳ ಶೌರ್ಯ ಮತ್ತು ಪರಾಕ್ರಮವನ್ನು ಗುರುತಿಸಿ ಕೀರ್ತಿಚಕ್ರ ಮತ್ತು ಶೌರ್ಯಚಕ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದೆ.
ಆರು ಕೀರ್ತಿಚಕ್ರಗಳನ್ನು ಪ್ರಕಟಿಸಲಾಗಿದ್ದು,ಈ ಪೈಕಿ ನಾಲ್ಕು ಪ್ರಶಸ್ತಿಗಳು ಮರಣೋತ್ತರವಾಗಿವೆ. ಎರಡು ಮರಣೋತ್ತರ ಸೇರಿದಂತೆ 15 ಶೌರ್ಯಚಕ್ರ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು. ಕೀರ್ತಿಚಕ್ರ:ಮೇ.ಶುಭಾಂಗ್,ನಾಯ್ಕಿ ಜಿತೇಂದ್ರ ಸಿಂಗ್,ರೋಹಿತಕುಮಾರ(ಮರಣೋತ್ತರ),ದೀಪಕ ಭಾರದ್ವಾಜ (ಮರಣೋತ್ತರ),ಸೋಧಿ ನಾರಾಯಣ (ಮರಣೋತ್ತರ) ಮತ್ತು ಶರವಣ ಕಶ್ಯಪ (ಮರಣೋತ್ತರ)
ಶೌರ್ಯಚಕ್ರ: ಮೇ.ಆದಿತ್ಯ ಬಹದೂರಿಯಾ,ಕ್ಯಾ.ಅರುಣ ಕುಮಾರ,ಕ್ಯಾ.ಯುಧ್ವೀರ ಸಿಂಗ್,ಕ್ಯಾ.ರಾಕೇಶ ಟಿ.ಆರ್.,ನಾಯ್ಕಾ ಜಸ್ಬೀರ್ ಸಿಂಗ್,ಲಾನ್ಸ್ ನಾಯ್ಕ್ ವಿಕಾಸ ಚೌಧರಿ,ಕಾನಸ್ಟೇಬಲ್ ಮುದಾಸಿರ್ ಅಹ್ಮದ್ ಶೇಖ್,ಗ್ರುಪ್ ಕ್ಯಾ.ಯೋಗೇಶ್ವರ ಕೆ.ಕಂಡಲ್ಕರ್,ಫ್ಲೈಟ್ ಲೆಫ್ಟಿನಂಟ್ ತೇಜಪಾಲ್,ಸ್ಕ್ವಾಡ್ರನ್ ಲೀಡರ್ ಸಂದೀಪ ಕುಮಾರ ಝಝಾರಿಯಾ, ಎಲ್ಎಸಿ ಸುನಿಲ ಕುಮಾರ,ಅಸಿಸ್ಟಂಟ್ ಕಮಾಂಡಂಟ್ ಸತೇಂದ್ರ ಸಿಂಗ್,ಡೆಪ್ಯುಟಿ ಕಮಾಂಡಂಟ್ ವಿಕ್ಕಿ ಕುಮಾರ ಪಾಂಡೆ ಮತ್ತು ಕಾನ್ಸ್ಟೇಬಲ್ ವಿಜಯ ಓರಾನ್.