ಆಸ್ಟ್ರೇಲಿಯದಲ್ಲಿ ಮೂರು ಹಿಂದೂ ದೇಗುಲಗಳಲ್ಲಿ ದಾಂಧಲೆ: ಭಾರತ ಖಂಡನೆ

Update: 2023-01-26 09:03 GMT

ಮೆಲ್ಬೋರ್ನ್: ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ನಡೆದ ಮೂರು ಹಿಂದೂ ದೇವಾಲಯಗಳಲ್ಲಿ ದಾಂಧಲೆ ಹಾಗೂ  ಭಾರತ ವಿರೋಧಿ ಭಯೋತ್ಪಾದಕರನ್ನು ವೈಭವೀಕರಿಸುವ ಗೋಡೆ ಬರಹವನ್ನು ಭಾರತ ಇಂದು ಬಲವಾಗಿ ಖಂಡಿಸಿದೆ.

ಈ ತಿಂಗಳ ಆರಂಭದಲ್ಲಿ ಮೆಲ್ಬೋರ್ನ್‌ನ ಸ್ವಾಮಿ ನಾರಾಯಣ ದೇವಾಲಯ, ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಾಲಯ ಹಾಗೂ  ಮೆಲ್ಬೋರ್ನ್‌ನ ಇಸ್ಕಾನ್ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದ ಮೂಲಕ 'ಸಮಾಜವಿರೋಧಿಗಳು' ವಿರೂಪಗೊಳಿಸಿದ್ದರು.

“ಈ ಘಟನೆಗಳು ಶಾಂತಿಯುತ ಬಹು-ನಂಬಿಕೆ ಹಾಗೂ  ಬಹು-ಸಾಂಸ್ಕೃತಿಕ ಭಾರತೀಯ-ಆಸ್ಟ್ರೇಲಿಯನ್ ಸಮುದಾಯದ ನಡುವೆ ದ್ವೇಷ ಮತ್ತು ವಿಭಜನೆಯನ್ನು ಬಿತ್ತುವ ಸ್ಪಷ್ಟ ಪ್ರಯತ್ನಗಳಾಗಿವೆ. ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಪರವಾದವರು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತಿದ್ದಾರೆ, ಸಿಖ್ಸ್ ಫಾರ್ ಜಸ್ಟೀಸ್ (SFJ) ಹಾಗೂ ಆಸ್ಟ್ರೇಲಿಯಾದ ಹೊರಗಿನ ಇತರ ಶತ್ರು ಸಂಸ್ಥೆಗಳಂತಹ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಸಕ್ರಿಯವಾಗಿ ಸಹಾಯ ಮಾಡುತ್ತಾರೆ ಹಾಗೂ  ಬೆಂಬಲಿಸುತ್ತಿದ್ದಾರೆ" ಎಂದು ಭಾರತೀಯ ಹೈಕಮಿಷನ್  ಹೇಳಿದೆ.

Similar News