ಜಪಾನ್ : ಹಡಗು ಮುಳುಗಿ 8 ಮಂದಿ ಮೃತ್ಯು

Update: 2023-01-26 15:40 GMT

ಟೋಕಿಯೊ, ಜ.26: ಜಪಾನ್ ಕರಾವಳಿ ಬಳಿ ಸಮುದ್ರದಲ್ಲಿ ಹಡಗು ಮುಳುಗಿ 8 ಮಂದಿ ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

‌ಮೃತರಲ್ಲಿ 6 ಮಂದಿ ಚೀನಾ ಪ್ರಜೆಗಳು ಎಂದು ಚೀನಾದ ರಾಜತಾಂತ್ರಿಕ ಮೂಲಗಳು ಹೇಳಿವೆ. ನೈಋತ್ಯ ಜಪಾನ್ ನ ಜನವಸತಿಯಿಲ್ಲದ ಡಾಂಜೊ ದ್ವೀಪದ ಪಶ್ಚಿಮದ ಸಮುದ್ರದಲ್ಲಿ ಮಂಗಳವಾರ ಸಂಜೆ ಜಿನ್ ಟಿಯಾನ್ ಹಡಗು ಅಪಾಯದ ಸಂದೇಶ ರವಾನಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಜಪಾನ್ನ ಕರಾವಳಿ ಪಡೆ ಮತ್ತು ಸೇನೆಯ ನೌಕೆಗಳು ಹಾಗೂಯುದ್ಧವಿಮಾನಗಳು, ದಕ್ಷಿಣ ಕೊರಿಯಾ ಕರಾವಳಿ ಪಡೆಯ ನೌಕೆಗಳು, ಖಾಸಗಿ ನೌಕೆಗಳು ಶೋಧ ಮತ್ತು ಕಾರ್ಯಾಚರಣೆ ನಡೆಸಿ 13 ಸಿಬಂದಿಗಳನ್ನು ರಕ್ಷಿಸಲಾಗಿದೆ. 

ಆದರೆ 8 ಮಂದಿ ಮೃತಪಟ್ಟಿದ್ದಾರೆ ಎಂದು ಜಪಾನ್ನಲ್ಲಿರುವ ಚೀನಾದ ಕಾನ್ಸುಲ್ ಜನರಲ್ ಲು ಗುಯ್ಜಿನ್ರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಸಿಜಿಟಿನ್ ಟಿವಿವಾಹಿನಿ ವರದಿ ಮಾಡಿದೆ.ರಕ್ಷಿಸಲ್ಪಟ್ಟ 13 ಮಂದಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 9 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಜಪಾನ್ನ ಅಧಿಕಾರಿಗಳು ಹೇಳಿದ್ದಾರೆ.

Similar News