ಭಟ್ಕಳ: ಹೊನ್ನೆಗದ್ದೆ ಹೆಬಳೆ ಶಾಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ

Update: 2023-01-27 18:04 GMT

ಭಟ್ಕಳ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಗದ್ದೆ ಹೆಬಳೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಇಂದು ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿಯಾಗಿದ್ದು, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ಕಾಳಜಿ ವಹಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ, "ಶಾಸಕನಾದ ನಂತರ ಶಿಕ್ಷಣಕ್ಕೆ ಮತ್ತು ದೇವಾಲಯಗಳಿಗೆ ಹೆಚ್ಚು ಸಹಾಯ ಮಾಡಿದ್ದೇನೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರಕಾರಿ ಶಾಲೆಯಲ್ಲಿ ಉತ್ತಮ ತರಬೇತಿ ಹೊಂದಿದ ಶಿಕ್ಷಕರು ಇದ್ದು ಯಾರೂ ಕೂಡಾ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂಜರಿಯುವ ಅಗತ್ಯವಿಲ್ಲ. ಶಾಲಾ ಶಿಕ್ಷಣದೊಂದಿಗೆ ಪಾಲಕರೂ ಕೂಡಾ ಮನೆಯಲ್ಲಿ ಮಕ್ಕಳ ಶಿಕ್ಷಣ, ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಹೊನ್ನೆಗದ್ದೆ ಶಾಲೆಯ ಹಳೇ ವಿದ್ಯಾರ್ಥಿ ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡುತ್ತಿರುವ ಡಾ. ದೇವೇಂದ್ರ ಎನ್. ನಾಯ್ಕ  ಮಾತನಾಡಿದರು.

ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಅಂಗನವಾಡಿ ಶಿಕ್ಷಕಿ, ಅಡುಗೆಯವರು, ಸಹಾಯಕರನ್ನು ಗೌರವಿಸಲಾಯಿತು. ಕುಂದಾಪುರ ಬಂಡಾರ್‌ಕರ‍್ಸ್ ಕಾಲೇಜಿನ ಪ್ರಾಂಶುಪಾಲ ಗೋವಿಂದ ಗೊಂಡ ಉಪನ್ಯಾಸ ಮಾಡಿದರು. 

ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಕುಪ್ಪುಗೊಂಡ, ಸದಸ್ಯರುಗಳಾದ ಮಾದೇವಿ ಎನ್. ಮೊಗೇರ, ಚಂದ್ರು ಎಂ. ಗೊಂಡ, ವಿಜೇತ ಆರ್. ಶೆಟ್ಟಿ, ಶಶಿಕಲಾ ಎನ್. ಮೊಗೇರ, ನಿವೃತ್ತ ಶಿಕ್ಷಕ ಕೆ.ಜೆ. ನಾಯ್ಕ, ಗೋಪಾಕೃಷ್ಣ ಬ್ಯಾಂಕ ಸಿಬ್ಬಂದಿ ನಾಗರಾಜ ಕೆ. ಶೆಟ್ಟಿ, ಪ್ರಥಮ ದರ್ಜೆ ಕಾರ್ಯದರ್ಶಿ ಲೋಕೇಶ ಕೆ. ಗೊಂಡ, ಶಿಕ್ಷಕ ರಾಜೇಶ ಎನ್. ನಾಯ್ಕ, ಸ.ಹಿ.ಪ್ರಾ ಶಾಲೆ ತೆಂಗಿನಗುಂಡಿಯ ಶಿಕ್ಷಕಿ  ಹೇಮಲತಾ ಪಿ. ಮೊಗೇರ, ಮೊಗೇರ ಸಮಾಜದ ಪ್ರಮುಖ ನಾರಾಯಣ ಮೊಗೇರ, ನಾಮಧಾರಿ ಸಮಾಜದ ಪ್ರಮುಖ ಶಿವರಾಮ್ ಎನ್. ನಾಯ್ಕ, ದಾನಿಗಳು ಯಮುನಾ ಆರ್. ಶೆಟ್ಟಿ, ಸಾ.ಗ. ಸಮಿತಿ ಹೆರ್ತಾರ-ಹೊನ್ನೆಗದ್ದೆ ಅಧ್ಯಕ್ಷ ನಾರಾಯಣ ಮೊಗೇರ, ಬೋಟ ಚಾಲಕ ಹನುಮಂತ ಎಸ್. ಮೊಗೇರ, ಅಂಬೇಡ್ಕರ್ ಯುವಕ ಸಂಘ ಹೊನ್ನೆಗದ್ದೆ ಅಧ್ಯಕಷ ಧನಂಜಯ ಆರ್. ಮೊಗೇರ, ಅಮೃತ ಮಹೋತ್ಸವ ಸಮಿತಿ ಅಧ್ಯ÷್ಕಷ ರೋಹಿದಾಸ ಎಂ.ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷö್ಮಣ ಬಿ. ಮೊಗೇರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗಜಾನನ ಎಸ್. ಮೊಗೇರ, ಮುಖ್ಯೋಪಾಧ್ಯಾಯ ದೇವಪ್ಪ ಕೆ. ಅಳ್ವೇಕೋಡಿ ಉಪಸ್ಥಿತರಿದ್ದರು. 

ಮುಖ್ಯೋಪಾಧ್ಯಾಯ ಡಿ.ಕೆ. ಮೊಗೇರ ವರದಿ ವಾಚನ ಮಾಡಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಜನಾರ್ಧನ ಮೊಗೇರ, ಸುಮಲತಾ ನಾಯ್ಕ ನಿರ್ವಹಿಸಿದರು.  ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೊರಂಜನಾ ಕಾರ್ಯಕ್ರಮ ಜರುಗಿತು.

Similar News