ಪೌರತ್ವ ,ಪಾಸ್‌ಪೋರ್ಟ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತು: ನೇಪಾಳ ಉಪ ಪ್ರಧಾನಿ ವಜಾಗೊಳಿಸಿದ ಸುಪ್ರೀಂಕೋರ್ಟ್

Update: 2023-01-28 09:04 GMT

ಕಠ್ಮಂಡು: ಪೌರತ್ವ ಹಾಗೂ  ಪಾಸ್‌ಪೋರ್ಟ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ನೇಪಾಳದ ಸುಪ್ರೀಂ ಕೋರ್ಟ್ ರಬಿ ಲಮಿಚಾನೆ ಅವರನ್ನು ಉಪ ಪ್ರಧಾನ ಮಂತ್ರಿ ಹಾಗೂ  ಗೃಹ ಸಚಿವರ ಸ್ಥಾನದಿಂದ ವಜಾಗೊಳಿಸಿದೆ.

ತಮ್ಮ ಉಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠದ ಆದೇಶಗಳಿಗೆ ಅನುಗುಣವಾಗಿ, ರಬಿ ಅವರು ಸಂಸತ್ ಸದಸ್ಯರಾಗಿ ತಮ್ಮ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.

ಅಮೆರಿಕದ ಪೌರತ್ವವನ್ನು ತ್ಯಜಿಸಿದ ನಂತರ ನೇಪಾಳಿ ಪ್ರಜೆಯಾಗಿ ರಬಿ ನಡೆಸಿದ ಎಲ್ಲಾ ಕೆಲಸಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದು. ರಬಿ  ಲಮಿಚಾನೆ ನೇಪಾಳದ ಪೌರತ್ವವನ್ನು ಮರಳಿ ಪಡೆಯದೆ ಹಿಂತೆಗೆದುಕೊಳ್ಳಲಾದ ಪೌರತ್ವವನ್ನು ಬಳಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಜೂನ್ 2018 ರಲ್ಲಿ ರಬಿ ತನ್ನ ಅಮೆರಿಕದ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನೇಪಾಳದ ಕಾನೂನುಗಳ ಪ್ರಕಾರ, ವಿದೇಶದ ಪೌರತ್ವವನ್ನು ಸ್ವಯಂಪ್ರೇರಣೆಯಿಂದ ಪಡೆದುಕೊಳ್ಳುವ ನೇಪಾಳದ ಯಾವುದೇ ನಾಗರಿಕರು ತಮ್ಮ ನೇಪಾಳದ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುತ್ತಾರೆ.

Similar News