ಬಾಂಗ್ಲಾದೇಶದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕ 6 ದಿನಗಳ ನಂತರ ಮಲೇಷ್ಯಾದಲ್ಲಿ ಪತ್ತೆ!

Update: 2023-01-30 10:24 GMT

ಢಾಕಾ: ಬಾಂಗ್ಲಾದೇಶದಲ್ಲಿ ಕಣ್ಣಾಮುಚ್ಚಾಲೆ ಆಟವಾಡುವ ವೇಳೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕನೊಬ್ಬ ಆರು ದಿನಗಳ ನಂತರ ಮಲೇಷ್ಯಾದಲ್ಲಿ ಪತ್ತೆಯಾದ ವಿದ್ಯಮಾನ ನಡೆದಿದೆ.

ಬಾಂಗ್ಲಾದೇಶದ ಚಿತ್ತಗಾಂಗ್‌ ಬಂದರು ಪ್ರದೇಶದಲ್ಲಿ ತನ್ನ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆಯಾಟ ಆಡುತ್ತಿದ್ದ ಫಾಹಿಂ ಎಂಬ ಹೆಸರಿನ ಬಾಲಕ ಅಡಗಿ ಕುಳಿತುಕೊಳ್ಳಲು ಶಿಪ್ಪಿಂಗ್‌ ಕಂಟೇನರ್‌ ಒಳಗೆ ಹೋಗಿದ್ದನೆನ್ನಲಾಗಿದ್ದು ನಂತರ ಅಲ್ಲಯೇ ನಿದ್ದೆ ಹೋಗಿರಬೇಕು ಎಂದು ಊಹಿಸಲಾಗಿದೆ. ಈ ಕಂಟೇನರ್‌ ಅನ್ನು ನಂತರ ಹಡಗೊಂದಕ್ಕೆ ಲೋಡ್‌ ಮಾಡಲಾಗಿತ್ತು.

ಆರು ದಿನಗಳ ನಂತರ ಮಲೇಷ್ಯಾದಲ್ಲಿ ಆತ ಕಂಟೇನರ್ ಒಳಗೆ ಪತ್ತೆಯಾಗಿದ್ದ. ಹಸಿವು ಹಾಗೂ ನಿರ್ಜಲೀಕರಣದಿಂದ ಬಾಲಕ ಅತೀವ ಆಯಾಸ ಹೊಂದಿದ್ದನಲ್ಲದೆ ಜ್ವರದಿಂದಲೂ ಬಳಲುತ್ತಿದ್ದ.

ಆರಂಭದಲ್ಲಿ ಈತ ಮಾನವ ಕಳ್ಳಸಾಗಣಿಕೆಯ ಸಂತ್ರಸ್ತ ಎಂದು ಶಂಕಿಸಲಾಗಿತ್ತಾದರೂ ನಂತರ ಈತ ಆಟವಾಡುವಾಗ ಕಂಟೇನರ್‌ ಪ್ರವೇಶಿಸಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಸ್ ನಿಲ್ಲಿಸಿ ಕೆರೆಗೆ ಧುಮುಕಿ ಮುಳುಗುತ್ತಿದ್ದ ಇಬ್ಬರ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕ

Similar News