ಕಾರಂದೂರ್: 'ಇಝ್ದಿಹಾರ್-2K23' ಕಾರ್ಯಕ್ರಮ

Update: 2023-01-30 16:44 GMT

ಕಾರಂದೂರ್: ಮರ್ಕಝುಸ್ಸಖಾಫತು ಸುನ್ನೀಯ ಷರೀಅತ್ ಕಾಲೇಜಿನ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕೆ.ಎಸ್.ಒ ಇದರ ಕಲಾ ಕಾರ್ಯಕ್ರಮ 'ಇಝ್ದಿಹಾರ್-2K23' ರವಿವಾರ ರಾತ್ರಿ ಸಮಾರೋಪಗೊಂಡಿತು.

ಎರಡು ದಿನಗಳ ಕಾಲ ನಡೆದ ಕಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು  ಸ್ಪರ್ಧೆಗಳು ಉಮರ್ ಕಾಮಿಲ್ ಸಭಾಂಗಣದಲ್ಲಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಸ್.ಒ ನಿರ್ದೇಶಕ ವಿ.ಪಿ.ಎಮ್ ಫೈಝಿ ವಿಲ್ಯಾಪಳ್ಳಿ ಉಸ್ತಾದ್ ವಹಿಸಿದರು. ಡಾ. ಹಕೀಂ ಅಝ್ಹರಿ ಉದ್ಘಾಟಿಸಿ ಭಾಷೆಯ ಪ್ರಾಮುಖ್ಯತೆ, ಅವಕಾಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮಕ್ಕೆ ಶಾಸಕ ಯು.ಟಿ ಖಾದರ್, ಮೊಯ್ದಿನ್ ಬಾವ, ಕೇರಳ ಹಜ್ ಕಮಿಟಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಮೂರು ತಂಡಗಳಾಗಿ ನಡೆದ ಕಲಾ ಕಾರ್ಯಕ್ರಮದಲ್ಲಿ ಹಾರಿಸ್ ಮೋಟೆಪದವು ನೇತೃತ್ವದ ಗುಲ್ಷಾನ್ ಚಾಂಪಿಯನ್ ಆಗಿದ್ದು, ಮರ್ಝೂಖ್ ಜೌಹರಿ ಬದ್ಯಾರ್ ಅವರ ಗುಲ್ಝಾರ್ ತಂಡ ರನ್ನರ್ ಅಪ್ ಪಡೆದುಕೂಂಡಿತ್ತು. ಅಶ್ಫಾಖ್ ವಿಟ್ಲ ವೈಯಕ್ತಿಕ ಚಾಂಪಿಯನ್ ಆಗಿ ಮಿಂಚಿದರು.

ಮಷೂದ್ ವಂದಿಸಿದರು. ರಾಫಿ ಹಿಮಮಿ ಕಾರ್ಯಕ್ರಮವನ್ನು ನಿರೂಪಿಸಿದರು.

Similar News