ಭಾರತೀಯ ವಾಯು ಪಡೆಯ ನೂತನ ಉಪ ವರಿಷ್ಠರಾಗಿ ಏರ್ ಮಾರ್ಷಲ್ ಎ.ಪಿ. ಸಿಂಗ್ ನೇಮಕ

Update: 2023-01-31 15:00 GMT

ಹೊಸದಿಲ್ಲಿ, ಜ. 31: ಏರ್ ಮಾರ್ಷಲ್ ಎ.ಪಿ ಸಿಂಗ್ ಅವರು ಭಾರತೀಯ ವಾಯು ಪಡೆಯ ನೂತನ ಉಪ ವರಿಷ್ಠರಾಗಿ ನೇಮಕರಾಗಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. ಎ.ಪಿ. ಸಿಂಗ್ ಅವರು ಮಂಗಳವಾರ ನಿವೃತ್ತರಾದ ಏರ್ ಮಾರ್ಷಲ್ ಸಂದೀಪ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಎ.ಪಿ. ಸಿಂಗ್ ಅವರು ಪ್ರಸಕ್ತ ಸೆಂಟ್ರಲ್ ಏರ್ ಕಮಾಂಡ್ ನ ಏರ್ ಆಫಿಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬುಧವಾರ ಅವರು ಉಪ ವರಿಷ್ಠರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು 1984 ಡಿಸೆಂಬರ್ 21ರಂದು ಭಾರತೀಯ ವಾಯು ಪಡೆಯ ಯುದ್ಧ ವಿಮಾನಕ್ಕೆ ನಿಯೋಜನೆಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Similar News