ಹಣ ಅಕ್ರಮ ವರ್ಗಾವಣೆ ಪ್ರಕರಣ: ರಾಣಾ ಅಯ್ಯೂಬ್ ಮನವಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂ

Update: 2023-01-31 16:34 GMT

ಹೊಸದಿಲ್ಲಿ, ಜ. 31: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಘಾಝಿಯಾಬಾದ್ನಲ್ಲಿರುವ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ ಸಮನ್ಸ್ ಅನ್ನು ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಸಲ್ಲಿಸಿದ ಮನವಿಯ ಮೇಲಿನ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಹ್ಮಣೀಯನ್ ಹಾಗೂ ಜೆ.ಬಿ. ಪರ್ದಿವಾಲ ಅವರನ್ನು ಒಳಗೊಂಡ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. 

ಕಾನೂನಿನಿಂದ ಅಧಿಕೃತಗೊಳ್ಳದ ಕಾರ್ಯ ವಿಧಾನದಿಂದ ಅವರ ವೈಯುಕ್ತಿಕ ಸ್ವಾತಂತ್ರವನ್ನು ಕಸಿದುಕೊಳ್ಳಬಹುದೇ ? ಎಂದು ಅಯ್ಯೂಬ್ ಪರ ನ್ಯಾಯವಾದಿ ವೃಂದಾ ಗ್ರೋವರ್ ಪ್ರಶ್ನಿಸಿದರು. ಈ ಪ್ರಕರಣ ಮುಂಬೈಯಲ್ಲಿ ನಡೆದಿದೆ ಎಂದು ಹೇಳಲಾಗಿರುವುದರಿಂದ ಗಾಝಿಯಾಬಾದ್ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಕಾರ್ಯ ವ್ಯಾಪ್ತಿ ಇಲ್ಲ ಎಂದು ಗ್ರೋವರ್ ಹೇಳಿದರು. 

Similar News