ಅಮೆರಿಕ ಗುಪ್ತಚರ ಇಲಾಖೆಯ ತುಚ್ಛ ವ್ಯಕ್ತಿಗಳಿಗಿಂತ ಪುಟಿನ್ ಹೆಚ್ಚು ವಿಶ್ವಾಸಾರ್ಹ: ಡೊನಾಲ್ಡ್ ಟ್ರಂಪ್‌

Update: 2023-01-31 17:02 GMT

ವಾಷಿಂಗ್ಟನ್, ಜ.31: ಅಮೆರಿಕದ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವ ತುಚ್ಛ, ಅನೈತಿಕ ಸಿಬಂದಿಗಳಿಗಿಂತ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಗ್ಗೆ ತನಗೆ ಹೆಚ್ಚು ವಿಶ್ವಾಸವಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

2018ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ರಶ್ಯ  ಅಧ್ಯಕ್ಷ ಪುಟಿನ್ ಜತೆ ನಿಂತಿರುವ ಫೋಟೋ ಮಾಧ್ಯಮದಲ್ಲಿ ಪ್ರಕಟವಾಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು, ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಹೆಲ್ಸಿಂಕಿಯಲ್ಲಿ ಓರ್ವ ಥರ್ಡ್‌ಕ್ಲಾಸ್ ವರದಿಗಾರ ನನ್ನಲ್ಲಿ `ನೀವು ಯಾರ ಮೇಲೆ ಹೆಚ್ಚು ವಿಶ್ವಾಸ ಇರಿಸಿಕೊಂಡಿದ್ದೀರಿ.. ಪುಟಿನ್ ಅವರನ್ನೋ ಅಥವಾ ಅಮೆರಿಕದ ಗುಪ್ತಚರ ಅಧಿಕಾರಿಗಳನ್ನೋ' ಎಂದು ಪ್ರಶ್ನಿಸಿದ್ದ.

ಆಗಲೂ ನನ್ನ ಉತ್ತರ ಇದೇ ಆಗಿತ್ತು `ಅಮೆರಿಕ ಗುಪ್ತಚರ ಇಲಾಖೆಯ ತುಚ್ಛ ಅಧಿಕಾರಿಗಳಿಗಿಂತ ನಾನು ಪುಟಿನ್ರನ್ನು ಹೆಚ್ಚು ನಂಬುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ.

Similar News