ಉಡುಪಿ ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷರಾಗಿ ಎಂ.ಪಿ.ಮೊಯ್ದಿನಬ್ಬ
ಉಡುಪಿ: ಉಡುಪಿ ಜಿಲ್ಲಾ ಸುನ್ನಿ ಯುವ ಜನ ಸಂಘ(ಎಸ್‌ವೈಎಸ್) ಇದರ ನೂತನ ಸಮಿತಿಯ ಅಧ್ಯಕ್ಷರಾಗಿ ಎಂ.ಪಿ.ಮೊಯ್ದಿನಬ್ಬ ಹಾಜಿ ಪಲಿಮಾರು ಆಯ್ಕೆಯಾಗಿದ್ದಾರೆ.
ಎರ್ಮಾಳ್ ಬಡಾ ಮದ್ರಸ ಹಾಲ್‌ನಲ್ಲಿ ಮಂಗಳವಾರ ರಾಜ್ಯ ಸಂಯೋಜಕ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉಸ್ತಾದರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶಬೀರ್ ಫೈಝಿ ಎರ್ಮಾಳ್, ಅಬ್ದುರ‌್ರಹ್ಮಾನ್ ಕುಚ್ಚಿಕ್ಕಾಡ್, ಇಜ್ಜಬ್ಬ ಹಾಜಿ ಎರ್ಮಾಳ್, ಮುಹಮ್ಮದ್ ಪಣಿಯೂರು, ಪ್ರಧಾನ ಕಾರ್ಯ ದರ್ಶಿಯಾಗಿ ಹಂಝ ಫೈಝಿ ರೆಂಜಾಳ, ಜೊತೆ ಕಾರ್ಯದರ್ಶಿಯಾಗಿ ರಿಯಾಝ್ ಫೈಝಿ ಪಲಿಮಾರು, ಅಝೀಝ್ ಕಾಂಜರಕಟ್ಟೆ, ಕೋಶಾಧಿಕಾರಿ ಯಾಗಿ, ಅಬ್ದುರ‌್ರಹ್ಮಾನ್ ಹಾಜಿ ಕನ್ನಂಗಾರು, ಸಂಘಟನಾ ಕಾರ್ಯದರ್ಶಿಯಾಗಿ, ಮೊಹಿಯುದ್ದೀನ್ ರೆಂಜಾಳ, ಲೆಕ್ಕಪರಿಶೋಧಕರಾಗಿ ಹಮ್ಮಬ್ಬ ಹಾಜಿ ಪಡುಬಿದ್ರೆ ಆಯ್ಕೆಯಾದರು.
ಕಾರ್ಯಕ್ರಮವನ್ನು ಎಸ್.ಬಿ.ಮುಹಮ್ಮದ್ ದಾರಿಮಿ ಉದ್ಘಾಟಿಸಿದರು. ಎಸ್‌ವೈಎಸ್ ಕೇಂದ್ರ ಸಮಿತಿಯ ಸದಸ್ಯ ಹಕೀಂ ಪರ್ತ್ತಿಪ್ಪಾಡಿ ಉಪಸ್ಥಿತರಿದ್ದರು. ಎರ್ಮಾಳ್ ಮಸೀದಿ ಖತೀಬ್ ಶಬೀರ್ ಫೈಝಿ ದುವಾ ನೆರವೇರಿಸಿದರು.