ಹಣಕಾಸು ಸಚಿವರ ಬಜೆಟ್ ದಿನದ ಸಂಭ್ರಮಕ್ಕೆ ಅದಾನಿ ಕಂಪನಿ ಷೇರು ಅಡ್ಡಿ!

Update: 2023-02-02 03:27 GMT

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿದ್ದಂತೆ, ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿ ಸೆನ್ಸೆಕ್ಸ್ 1200 ಪಾಯಿಂಟ್‌ಗಳನ್ನು ಮೇಲೇರಿತು. ಬಜೆಟ್ ಭಾಷಣ ಮುಗಿಯುವ ವೇಳೆಗೆ ಸೆನ್ಸೆಕ್ಸ್ 61 ಸಾವಿರದ ಸನಿಹದಲ್ಲಿತ್ತು.

ಆದರೆ ಅದಾನಿ ಕಂಪನಿ ಷೇರುಗಳ ವ್ಯಾಪಕ ಮಾರಾಟ ದಿನದ ಮಧ್ಯಮ ಅವಧಿಯಲ್ಲಿ ವ್ಯಾಪಾರಿ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಅದಾನಿ ಸಮೂಹ ಕಂಪನಿಗಳು ಮೇಲಾಧಾರವಾಗಿ ಬಿಡುಗಡೆ ಮಾಡಿದ ಬಾಂಡ್‌ಗಳನ್ನು ಸ್ವೀಕರಿಸುವುದನ್ನು ಕ್ರೆಡಿಟ್ ಸೂಸೆ ಸ್ಥಗಿತಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಪ್ರಪಾತಕ್ಕೆ ಕುಸಿಯಿತು. ಸೆನ್ಸೆಕ್ಸ್ ದಿನದ ಗರಿಷ್ಠ ಪ್ರಮಾಣದಿಂದ 2000 ಅಂಕಗಳಷ್ಟು ಕುಸಿತ ಕಂಡಿತು.

ಆದಾಗ್ಯೂ ಈ ಅವಧಿಯಲ್ಲಿ ಮುಖ್ಯವಾಗಿ ವಿದೇಶಿ ಶ್ರೇಣಿಯ ಹೂಡಿಕೆದಾರರಿಂದ ಚೌಕಾಸಿ ಬೇಟೆಯ ಪರಿಣಾಮ ಅಲ್ಪ ಏರಿಕೆ ಕಂಡು 59708ರಲ್ಲಿ ಕೊನೆಗೊಂಡಿತು.
ಬುಧವಾರ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದರರು ಸುಮಾರು 200 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ದಿನದ ಅವಧಿಯಲ್ಲಿ ವಿದೇಶಿ ನಿಧಿಗಳು ಸುಮಾರು 1785 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿವೆ ಎಂದು ಬಿಎಸ್‌ಇ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ದೇಶೀಯ ನಿಧೀಗಳು ಕೂಡಾ ಖರೀದಿಗೆ ಆಸಕ್ತಿ ತೋರಿದ್ದು, ಒಟ್ಟು 529 ಕೋಟಿ ರೂಪಾಯಿ ಒಳಹರಿವು ದಾಖಲಾಗಿದೆ.

Similar News